ಸರಕಾರ ಗ್ರಾಮ ಲೆಕ್ಕಾಧಿಕಾರಿಗಳ ಬೇಡಿಕೆ ಈಡೇರಿಸಿದೆ : ಗೀತಾ ಕೋಲ್ಚಾರ್

ಕರ್ನಾಟಕ ಜನ ಸರಕಾರವು ರಾಜ್ಯದ ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳಿಗೆ ಉಚಿತವಾಗಿ ಲ್ಯಾಪ್ಟಾಪ್ ವಿತರಿಸಬೇಕೆಂದು ಕ್ಯಾಬಿನೆಟ್ ಸಭೆಯಲ್ಲಿ ಮಾನ್ಯ ಕರ್ನಾಟಕ ಗಣ ಸರಕಾರದ ಕಂದಾಯ ಇಲಾಖೆಯ ಸಚಿವರಾದ ಕೃಷ್ಣೆ ಬೈರೇಗೌಡರವರು ಪ್ರಸ್ತಾಪವನ್ನು ಮಾಡಿದ್ದು ಅದರಂತೆ ಗ್ರಾಮದ ಎಲ್ಲಾ ಲೆಕ್ಕಾಧಿಕಾರಿಗಳಿಗೆ ಲ್ಯಾಪ್ಟಾಪ್ ವಿತರಿಸುದೆಂದು ತೀರ್ಮಾನಿಸಲಾಗಿರುತ್ತದೆ. ಸುಳ್ಯ ವಿಧಾನಸಭಾ ಕ್ಷೇತ್ರದ ಒಟ್ಟು 33 ಗ್ರಾಮ ಲೆಕ್ಕಾಧಿಕಾರಿಗಳಿಗೆ ಈಗಾಗಲೇ ಶಾಸಕಿ ಭಾಗೀರಥಿ ಮುರುಳ್ಯ ಇವರ ಮುಖಾಂತರ ಉಚಿತವಾಗಿ ಲ್ಯಾಪ್ಟಾಪ್ ವಿತರಣೆ ಮಾಡಲಾಗಿರುತ್ತದೆ ಎಂದು ಸುಳ್ಯಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿಯ ಸದಸ್ಯರಾದ ಶ್ರೀಮತಿ ಗೀತಾ ಕೋಲ್ಚಾರ್ ಮಾಧ್ಯಮಕ್ಕೆ ತಿಳಿಸಿರುತ್ತಾರೆ
ಗ್ರಾಮ ಲೆಕ್ಕಾಧಿಕಾರಿಗಳಿಗೆ ಲ್ಯಾಪ್ಟಾಪ್ : ಬೇಡಿಕೆಗೆ ಸ್ಪಂದಿಸಿದ ಸರಕಾರ..!!
ಗ್ರಾಮಲೆಕ್ಕಾಧಿಕಾರಿಗಳಿಗೆ ಲ್ಯಾಪ್ಟಾಪ್ : ಈ ಹಿಂದೆಗ್ರಾಮಲೆಕ್ಕಾಧಿಕಾರಿಗಳುರಾಜ್ಯಾದ್ಯಂತ ತಮ್ಮ ಸಂಘಟನೆಯ ವತಿಯಿಂದ ಕರ್ತವ್ಯ ನಿರ್ವಹಿಸುವ ಭಾಗವಾಗಿ ಸರಕಾರಕ್ಕೆ ಹಲವಾರು ಬೇಡಿಕೆಯನ್ನು ಇಟ್ಟು ಈಡೇರಿಸುವ ನಿಟ್ಟಿನಲ್ಲಿ ಕೆಲವು ದಿನಗಳ ಕಾಲ ಮುಷ್ಕರ ನಡೆಸಿದ್ದರು, ಕೊನೆಗೆ ಸರಕಾರ ಹಂತ ಹಂತವಾಗಿ ಬೇಡಿಕೆ ಈಡೇರಿಸುವ ಕುರಿತು ಭರವಸೆ ನೀಡಿದ ನಂತರ ಮುಷ್ಕರ ಹಿಂತೆಗೆದುಕೊಂಡಿದ್ದರು. ಆ ಸಂದರ್ಭದಲ್ಲಿ ಅವರು ಸರಕಾರಕ್ಕೆ ಸಲ್ಲಿಸಿದ ಬೇಡಿಕೆಯಲ್ಲಿ ಈ ಅಂಶವು ಒಳಗೊಂಡಿತ್ತು. ಇತ್ತೀಚೆಗೆ ಎಲ್ಲಾ ಕಡತ ಕೆಲಸಗಳು ಜಾಲಮಾಧ್ಯಮ (ಆನ್‌ಲೈನ್) ಮೂಲಕ ಸಲ್ಲಿಕೆ ಆಗಬೇಕಿದೆ ಅದ್ದರಿಂದ ನಮ್ಮ ಮೊಬೈಲ್ ಗಳಿಂದ ಕಷ್ಟ ಸಾಧ್ಯ ವಾಗುತ್ತಿದ್ದು ಸಮಸ್ಯೆ ಎದುರಾಗುತ್ತದೆ. ಇದಕ್ಕೊಂದುಪರ್ಯಾಯವ್ಯವಸ್ಥೆಕಲ್ಪಿಸಬೇಕು.ಎಂದುಅವರಬೇಡಿಕೆಆಗಿತ್ತು. ಇದೀಗ ಸರಕಾರ ಗ್ರಾಮಲೆಕ್ಕಾಧಿಕಾರಿಗಳಿಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಇವರ ಮುಖಾಂತರ ಲ್ಯಾಪ್ಟಾಪ್ ವಿತರಿಸಲಾಗಿದೆ





m

