ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ಹರ್ಲಡ್ಕ ಪುನರಾಯ್ಕೆ
ಸುಳ್ಯ : ದೇವಚಳ್ಳ
ಎಲಿಮಲೆ: ನುಸ್ರತುಲ್ ಇಸ್ಲಾಂ ಎಸೋಸಿಯೇಶನ್ (ರಿ.) ಎಲಿಮಲೆ ಸಂಸ್ಥೆಯ ವಾರ್ಷಿಕ ಮಹಾಸಭೆ ಸಂಸ್ಥೆಯ ಕಛೇರಿಯಲ್ಲಿ ಜರುಗಿತು. ಸಭೆಗೆ ಆಗಮಿಸಿದ ಅತಿಥಿ,ಸದಸ್ಯರ ಸಮ್ಮುಖದಲ್ಲಿ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಉದ್ಯಮಿ ಅಬ್ದುಲ್ ಲತೀಫ್ ಹರ್ಲಡ್ಕ ಇವರನ್ನು ಪುನರಾಯ್ಕೆ ಮಾಡಲಾಯಿತು. ಪ್ರದಾನ ಕಾರ್ಯದರ್ಶಿ ಯಾಗಿ ಸೂಫಿ ಎಲಿಮಲೆ,ಕೋಶಾಧಿಕಾರಿ ಯಾಗಿ ಬಾತಿಶಾ ಹಾಜಿ ಜೀರ್ಮುಕಿ ಅಯ್ಕೆ ಯಾದರು,

ಸಭೆಯ ಅಧ್ಯಕ್ಷತೆಯನ್ನು ಲತೀಫ್ ಹರ್ಲಡ್ಕ ವಹಿಸಿದರು ಎಲಿಮಲೆ ಜುಮಾ ಮಸೀದಿಯ ಮುದರ್ರಿಸರಾದ ಸಯ್ಯದ್ ಮುಹ್ಸಿನ್ ಅಲವಿಕೋಯ ಕುಂಜಿಲಂ ತಂಙಳ್ ರವರು ದುವಾ ನೆರವೇರಿಸಿ ಸಭೆಗೆ ಚಾಲನೆ ನೀಡಿದರು ಸಭೆಗೆ ಸಂಸ್ಥೆಯ ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸೂಫಿ ಎಲಿಮಲೆ ಮಂಡಿಸಿದರು. ಮುಖ್ಯ ಅಥಿತಿಗಳಾಗಿ ಜಮಾಅತ್ ಅಧ್ಯಕ್ಷ ಅಬ್ದುಲ್ ಕಾದರ್ ಪಾಣಾಜೆ, ಜೀರ್ಮುಕಿ ಮಸೀದಿ ಅಧ್ಯಕ್ಷ ಹಸನ್ ಹರ್ಲಡ್ಕ, ಅಬ್ದುಲ್ಲ G.S, ಅಬೂಬಕ್ಕರ್ ಪಾಣಾಜೆ, ಮಹಮದ್ ಕುಂಞಿ ಮೇಲೆಬೈಲು, ಮಹಮ್ಮದ್ ಹಾಜಿ ಹರ್ಲಡ್ಕ. ಜಮಾಅತ್ ಕಾರ್ಯದರ್ಶಿ ಇಬ್ರಾಹಿಂ ಜೀರ್ಮುಕಿ ಉಪಸ್ಥಿತರಿದ್ದು ಸಂಸ್ಥೆಗೆ ಶುಭ ಹಾರೈಸಿದರು. ಕಾರ್ಯಕ್ರಮವನ್ನು ಹಾರಿಸ್ ಪಳ್ಳಿಕಲ್ ಸ್ವಾಗತಿಸಿ ಅಶ್ರಫ್ G.A.K ವಂದಿಸಿದರು
ನೂತನ ಕಾರ್ಯಕಾರಿ ಸಮಿತಿ ಸದಸ್ಯರು
ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ಹರ್ಲಡ್ಕ , ಉಪಾಧ್ಯಕ್ಷ ರಾಗಿ ಹೈದರ್ ಹಾಜಿ, ಅಬ್ದುಲ್ ಕಾದರ್ ಅತ್ತಿಮಾರಡ್ಕ, ಪ್ರಧಾನ ಕಾರ್ಯದರ್ಶಿ ಸೂಫಿ ಎಲಿಮಲೆ, ಕಾರ್ಯದರ್ಶಿಗಳಾಗಿ ನಾಸಿರ್ ದೊಡ್ಡಂಗಡಿ, ಅಶ್ರಫ್G.A.K. ಕೋಶಾಧಿಕಾರಿಯಾಗಿ ಬಾತಿಶಾ ಹಾಜಿ,ಮೇರೇಜ್ ಫಂಡ್ ಕನ್ವೀನರಾಗಿ ಮಹಮೂದ್ ಸಖಾಫಿ, ಆಯ್ಕೆಯಾದರು ಸಮಿತಿಯ ನಿರ್ದೇಶಕರಾಗಿ ಹಾರಿಸ್ ಪಳ್ಳಿಕಲ್, ಸಾಬಿತ್ ಪಾಣಾಜೆ, ರಫೀಕ್ ಜೀರ್ಮುಕಿ, ಸತ್ತಾರ್ ಮೇಲೆಬೈಲು, ಶಾಫಿ ಜೀರ್ಮುಕಿ,ಆಸಿಫ್ ಹೊಟ್ಟಿಚೋಡಿ,ಹನೀಫ್ ಜೀರ್ಮುಕಿ, ಶಿಹಾಬ್ ಪಾಣಜೆ,ಶರೀಫ್ ದೊಡ್ಡಂಗಡಿ ವಿಶೇಷ ಪ್ರತಿನಿಧಿಗಳಾಗಿ ಅಶ್ರಫ್ ಹೆಚ್ ಯಂ, ಸುಲೈಮಾನ್ ಮೆತ್ತಡ್ಕ, ಬಶೀರ್ ಮೆತ್ತಡ್ಕ,ನೌಶಾದ್ ತಳೂರು ಆಯ್ಕೆಯಾದರು.





m

