Featured, ಅಂಕಣ, ಸ್ಥಳೀಯ

EDU CHARITY ಮೂಲಕ ಪ್ರಸಕ್ತ ಸಾಲಿನಲ್ಲಿ ನೂರಾರು ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಶೈಕ್ಷಣಿಕ ಸಹಾಯ ನೀಡಲಾಗಿದೆ: ಬಾತೀಷ್ ಅಳಕೆಮಜಲು;

ಬಾತೀಷ್ ಅಳಕೆಮಜಲು ರವರ ನೇತೃತ್ವದಲ್ಲಿ ಬಡ ವಿದ್ಯಾರ್ಥಿ ಗಳ ಶೈಕ್ಷಣಿಕ ಸಹಾಯ ಕ್ಕಾಗಿ ಸ್ಥಾಪಿಸಲ್ಪಟ್ಟ EDu ಚಾರಿಟೇಬಲ್ ಟ್ರಸ್ಟ್ ಮೂಲಕ ಪ್ರಸ್ತುತ ವರ್ಷದಲ್ಲಿ ನೂರಾರು ವಿದ್ಯಾರ್ಥಿಗಳು ವಿವಿಧ ರೀತಿಯ ಪ್ರಯೋಜನ ಪಡೆದಿದ್ದಾರೆ, ಬಡ ವಿದ್ಯಾರ್ಥಿ ಗಳಿಗೆ ತಮ್ಮ ಶಿಕ್ಷಣ ಮುಂದುವರಿಸಲು ಸಹಾಯ ಮಾಡುವ ಉದ್ದೇಶದಿಂದ ಈ ಚಾರಿಟಿ ಕಾರ್ಯನಿರ್ವಹಿಸುತಿದೆ. ಯಾವುದೇ ವಿದ್ಯಾರ್ಥಿಗಳು ತಮ್ಮ ವಿದ್ಯಬ್ಯಾಸ ಮುಂದುವರಿಸಲು ಉಂಟಾಗುವ ಆರ್ಥಿಕ ಹಾಗೂ ಇನ್ನಿತರ ತೊಂದರೆ ಗಳ ಬಗ್ಗೆ EDU ಚಾರಿಟಿ ಕಾರ್ಯಕರ್ತರ ಗಮನಕ್ಕೆ ತಂದಾಗ ಅವರ ಸಹಾಯಕ್ಕೆ ತಕ್ಷಣ ಮುಂದಾಗುವ ಚಾರಿಟಿ ಇದಾಗಿದೆ, ಪ್ರತಿಯೊಂದು ವಿದ್ಯಾರ್ಥಿ ಗಳ ಸಮಸ್ಯೆ ಗಳನ್ನು ದಾನಿಗಳ ಮುಂದಿಟ್ಟು ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ನೀಡುತ್ತಾ ಬಂದಿದೆ.

Edu Charity ವತಿಯಿಂದ ಈ ವರ್ಷ ನಡೆದ ಶೈಕ್ಷಣಿಕ ಕಾರ್ಯಗಳು.

  1. 8000 ಕ್ಕಿಂತಲೂ ಹೆಚ್ಚಿನ ನೋಟ್ ಬುಕ್ ಗಳನ್ನ ಸುಮಾರು 450ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗಿದೆ.
  2. 17 ವಿದ್ಯಾರ್ಥಿಗಳಿಗೆ ಶಾಲೆ ಹಾಗೂ ಕಾಲೇಜು ಸೇರಲು ಬೇಕಾದ ಆರ್ಥಿಕ ಸಹಾಯ ಮಾಡಲಾಗಿದೆ..
  3. 47 ವಿದ್ಯಾರ್ಥಿಗಳಿಗೆ ಬ್ಯಾಗ್ ನೀಡಲಾಗಿದೆ.
  4. ಕೆಲವು ವಿದ್ಯಾರ್ಥಿಗಳಿಗೆ ನೀಟ್ ಅಧ್ಯಯನ ಪುಸ್ತಕ ನೀಡಲಾಗಿದೆ.

ಹಲವಾರು ವಿದ್ಯಾರ್ಥಿಗಳಿಗೆ ಹಳೆಯ ಪಠ್ಯ ಪುಸ್ತಕಗಳನ್ನು ಸಂಗ್ರಹಿಸಿ ನೀಡಲಾಗಿದೆ.. ಹಾಗೂ ಶಾಲಾ ಪೀಸು ಕಟ್ಟಲು ಸಾಧ್ಯವಾಗದೆ ಶೈಕ್ಷಣಿಕ ಕನಸಿನಿಂದ ಹೊರಬರುವ ಹಲವಾರು ವಿದ್ಯಾರ್ಥಿ ಗಳಿಗೆ ಆರ್ಥಿಕ ನೆರವು ನೀಡಿ ವಿದ್ಯಾಭ್ಯಾಸವನ್ನು ಮುಂದುವರಿಸಲು ಕ್ರಮ ಕೈಗೊಳ್ಳಲಾಗಿದೆ, ಬಡ ವಿದ್ಯಾರ್ಥಿ ಗಳ ಶೈಕ್ಷಣಿಕ ಸಂಬ್ಬಂದಿಸಿದ ಸಮಸ್ಯೆ ಗಳಿಗೆ ತುರ್ತು ಸಹಾಯ ಮಾಡಲಾಗುತದೆ ಎಂದು EDU ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥರಾದ ಬಾತೀಷ್ ಅಳಕೆಮಜಲು ರವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ ಮಾಹಿತಿ ನೀಡಿದ್ದಾರೆ.

m

Related Posts