Featured, ಇತರೆ, ಸ್ಥಳೀಯ

ಸುಬ್ರಹ್ಮಣ್ಯ: ಅಂಬ್ಯುಲೆನ್ಸ್ ಚಾಲಕ ನಾಪತ್ತೆ ಪ್ರಕರಣ, ಲಭಿಸದ ಸುಳಿವು : ಪತ್ತೆ ಗಾಗಿ ಮುಂದುವರಿದ ಶೋಧ ಕಾರ್ಯಾ

ತಡರಾತ್ರಿಯಿಂದ ನಿರಂತರ ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡ ಸುಳ್ಯ ತಾಲೂಕು ಅಂಬುಲೆನ್ಸ್ ಚಾಲಕ ಮಾಲಕರ ಸಂಘದ ಸದಸ್ಯರು

ಕಡಬ/ಸುಬ್ರಹ್ಮಣ್ಯ

ಸುಳ್ಯ ತಾಲೂಕು ಅಂಬುಲೆನ್ಸ್ ಚಾಲಕ ಮಾಲಕರ ಸಂಘದ ಸಕ್ರಿಯ ಸದಸ್ಯರಾಗಿರುವ ಹೊನ್ನಪ್ಪ ದೇವರಗದ್ದೆ ನಾಪತ್ತೆಯಾಗಿರುವ ಪ್ರಕರಣ ತೀವ್ರತೆ ಪಡೆದುಕೊಂಡಿದ್ದು, ಇದೀಗ ಪತ್ತೆ ಕಾರ್ಯ ನಿರಂತರವಾಗಿ ಮುಂದುವರೆದಿದೆ. ನಿನ್ನೆ ತಡ ರಾತ್ರಿ ವರೆಗೆ ಶೋಧ ಕಾರ್ಯಚಟುವಟಿಕೆ ನಡೆಸಿದ ಸುಳ್ಯ ಅಂಬುಲೆನ್ಸ್ ಚಾಲಕ ಮಾಲಕರ ಸಂಘದ ಸದಸ್ಯರು, ಇಂದು ಮಳೆಯನ್ನು ಲೆಕ್ಕಿಸದೆ ಮತ್ತಷ್ಟು ಚುರುಕಿನಿಂದ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

ಈ ಶೋಧ ಕಾರ್ಯದಲ್ಲಿ ಸಂಘದ ಸದಸ್ಯರಾದ ಪ್ರದೀಪ್ ಪಂಜ, ಸಿದ್ದೀಕ್ ಗೂನಡ್ಕ, ಉದಯಕುಮಾರ್ ಪಂಜ, ಸಿದ್ದೀಕ್ ಜಟ್ಟಿಪಳ್ಳ, ಮಿಥುನ್ ಸುಳ್ಯ, ರಫೀಕ್ ಬಿ.ಯಮ್, ಶಮೀಮ್ ಸುಳ್ಯ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ನಾಪತ್ತೆಯಾದ ಬಳಿಕ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂಬುದೇ ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ.

ಸ್ಥಳೀಯ ಪೊಲೀಸರು,ಎಸ್ ಡಿ ಆರ್ ಎಫ್, ಹಾಗೂ ಬಂಧುಮಿತ್ರರ ಸಹಕಾರದಿಂದ ಶೋಧ ಕಾರ್ಯ ಮುಂದುವರೆದಿದ್ದು, ಶೀಘ್ರ ಪತ್ತೆಯ ಬಗ್ಗೆ ಆಶೆ ವ್ಯಕ್ತವಾಗಿದೆ.

m

Related Posts