ಸುಳ್ಯ ಗಾಂಧಿನಗರ ಜಮಾ-ಅತ್‌ನ ಹಿರಿಯ ಸದಸ್ಯರು ಹಾಗೂ ಸುಳ್ಯ ಕರಾವಳಿ ವಾಣಿಜ್ಯ ಸಂಕೀರ್ಣದ ಮಾಲಕರಾದ ಅಹಮದ್ ಹಾಜಿ ಕರಾವಳಿ (95) ಅವರು ಅಲ್ಪಕಾಲದ ಅಸೌಖ್ಯದಿಂದ ಮೇ 12ರಂದು ನಿಧನರಾದರು.
ಹಲವಾರು ವರ್ಷಗಳ ಕಾಲ ಪುಟ್ಟ ಅಂಗಡಿ ವ್ಯಾಪಾರಿಯಾಗಿ ಕಾರ್ಯನಿರ್ವಹಿಸಿದ್ದ ಅವರು ಸ್ಥಳೀಯ ಜನರಿಗೆ ಚಿರಪರಿಚಿತರಾಗಿದ್ದರು.
ಮೃತರು ಪುತ್ರರಾದ ಅಬ್ದುಲ್ ಕಾದರ್ ಹಾಗೂ ಶರೀಫ್ (ವಾಣಿಜ್ಯ ಇಲಾಖೆಯ ಉನ್ನತ ಅಧಿಕಾರಿ), ಪುತ್ರಿಯರಾದ ಬಿಫಾತಿಮ್ಮ, ಸುಬೈದ, ಹಾಜಿರ ಹಾಗೂ ಮೊಮ್ಮಗ ಸಾಮಾಜಿಕ ಕಾರ್ಯಕರ್ತ ಮಶೂದ್ (ಮಚ್ಚು) ಸೇರಿದಂತೆ ಅಪಾರ ಬಂಧು-ಬಳಗ, ಮೊಮ್ಮಕ್ಕಳು ಮತ್ತು ಮರಿಮಕ್ಕಳನ್ನು ಅಗಲಿದ್ದಾರೆ.
ಮೃತರ ಜನಾಝ ನಮಾಝ್ ಇಂದು (ಮೇ 12, ಮಂಗಳವಾರ) ಅಸರ್ ನಮಾಝ್ ಬಳಿಕ ಗಾಂಧಿನಗರ ಜುಮಾ ಮಸೀದಿಯಲ್ಲಿ ನಡೆಯಲಿದ್ದು, ನಂತರ ದಫನ ಕಾರ್ಯ ನೆರವೇರಲಿದೆ.
