Featured, ಅಂಕಣ, ಸ್ಥಳೀಯ

ಭಾರತೀಯ ಜನತಾ ಪಾರ್ಟಿಯ ಇಂದಿನ ಬೆಳವಣಿಗೆಗೆ ಹಿರಿಯರ ಪರಿಶ್ರಮ ಶ್ರೇಯಸ್ವರೂಪಿ: ಶಾಸಕಿ ಭಾಗೀರಥಿ ಮುರುಳ್ಯ

ಬಿಜೆಪಿ ಸುಳ್ಯ ಮಂಡಲದ  ಮಹಿಳಾ ಮೋರ್ಚಾದ ಕಾರ್ಯನಿರ್ವಹಣಾ ಸಭೆ ಹಾಗೂ ಆಟಿದ ಕೂಟ

ಸುಳ್ಯ:“ಭಾರತೀಯ ಜನತಾ ಪಾರ್ಟಿ ಇಂದು ಈ ಮಟ್ಟಕ್ಕೆ ಬೆಳೆದಿದ್ದು ಹಿರಿಯರ ಪರಿಶ್ರಮ, ತ್ಯಾಗ ಮತ್ತು ಬಲಿದಾನದ ಫಲ. ಹಿರಿಯರು ಕಟ್ಟಿದ ಈ ಪವಿತ್ರ ಪಕ್ಷವನ್ನು ನಿರಂತರ ಕಾರ್ಯಚಟುವಟಿಕೆಗಳ ಮೂಲಕ ಮುನ್ನಡೆಸೋಣ. ಹುದ್ದೆಗಳು ಶಾಶ್ವತವಲ್ಲ. ನಾವು ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ ದುಡಿಯಬೇಕು. ಹಿರಿಯರು ಆಚರಿಸುತ್ತಿದ್ದ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವಲ್ಲಿ ಸಕ್ರೀಯರಾಗೋಣ” ಎಂದು ಭಾಗವಹಿಸಿದ್ದ ಶಾಸಕಿ ಭಾಗೀರಥಿ ಮುರುಳ್ಯ ಅವರು ಹೇಳಿದರು.

ಅವರು ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ಮಹಿಳಾ ಮೋರ್ಚಾದ ಕಾರ್ಯನಿರ್ವಹಣಾ ತಂಡದ ಸಭೆ ಹಾಗೂ ಆಟಿದ ಕೂಟ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಡಾ. ಮಂಜುಳಾ ರಾವ್ ಮಾತನಾಡಿ:

“ನಮಗೆ ದೊರೆತಿರುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು, ಭಾರತೀಯ ಜನತಾ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸವನ್ನು ಮಾಡೋಣ” ಎಂದು ಕರೆ ನೀಡಿದರು.

ಮಂಡಲದ ಅಧ್ಯಕ್ಷೆ ಶ್ರೀಮತಿ ಇಂದಿರಾ ಬಿ.ಕೆ ಅಧ್ಯಕ್ಷತೆ ವಹಿಸಿದ್ದರು.

ಮಂಡಲದ ಕಾರ್ಯದರ್ಶಿ ಶ್ರೀಮತಿ ಭಾರತಿ ಪುರುಷೋತ್ತಮ್ ಅವರು ಆಟಿಕೂಟದ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಆಟಿ ತಿಂಗಳ ವಿಶೇಷ ತಿನಿಸುಗಳನ್ನು ಸವಿದ ಮೂಲಕ ಆಟಿದ ಕೂಟವನ್ನು ಸಂಭ್ರಮದಿಂದ ಆಚರಿಸಲಾಯಿತು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಪ್ರಮುಖರು:

ಶ್ರೀಮತಿ ಲಕಿತಾ ಶೆಟ್ಟಿ – ಜಿಲ್ಲಾಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸಂಧ್ಯಾ ವೆಂಕಟೇಶ್ ಯಸ್ವಿನಿ ಶಾಸ್ತ್ರಿ – ಜಿಲ್ಲಾ ಪ್ರಭಾರಿಯಾದವರು ಶ್ರೀಮತಿ ಗುಣವತಿ ಕೊಲ್ಲಂತಡ್ಕ – ಜಿಲ್ಲಾ ಉಪಾಧ್ಯಕ್ಷೆ ಶ್ರೀಮತಿ ಜಾನ್ಹವಿ ಕಾಂಚೋಡು – ಜಿಲ್ಲಾ ಕಾರ್ಯದರ್ಶಿ ವಿನಯ ಕಂದಡ್ಕ – ಮಂಡಲದ ಪ್ರಧಾನ ಕಾರ್ಯದರ್ಶಿ ಹಾಗೂ ಮಹಿಳಾ ಮೋರ್ಚಾದ ಇತರೆ ಪದಾಧಿಕಾರಿಗಳು

ಅನುಷ್ಠಾನ ಮತ್ತು ಕಾರ್ಯಕ್ರಮ ನಿರ್ವಹಣೆ:

ಶ್ರೀಮತಿ ಹೇಮಾ ಮೋಹನ್ ದಾಸ್ – ಪ್ರಾರ್ಥನೆ ಮಾಡಿದರು ಶಶಿಕಲಾ ಎ. – ಸ್ವಾಗತಿಸಿದರು ಆಶಾ ರೈ ಕಲಾಯಿ  ನಿರೂಪಿಸಿದರು ಲೋಲಾಕ್ಷಿ ಧನ್ಯವಾದ ಮಾಡಿದರು.

m

Related Posts