Featured, ಅಂಕಣ, ಸ್ಥಳೀಯ

ತಲಪಾಡಿಯಲ್ಲಿ ನಡೆದ ರಿಕ್ಷಾ ಮತ್ತು ಸರ್ಕಾರಿ ಬಸ್ ಭೀಕರ ಅಪಘಾತ: ತೀವ್ರ ಕಳವಳ ವ್ಯಕ್ತಪಡಿಸಿದ SDAU ನೆಲ್ಯಾಡಿ

ಈ ಘಟನೆಗೆ ಸಂಪೂರ್ಣ ಜವಾಬ್ದಾರಿ ಕರ್ನಾಟಕ ಸರಕಾರ, ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಂತೆ ಬಸ್ಸಿನ ಚಕ್ರಗಳು ಸಂಪೂರ್ಣ ಸವೆತು ಹೋಗಿದ್ದು ‌, ಬಸ್ಸಿಗೆ ಇನ್ಶುರೆನ್ಸ್ ಕೂಡ ಇಲ್ಲ ಎಂದು ತನಿಖೆಯಿಂದ ತಿಳಿದು ಬಂದಿದೆ, ಸರ್ವಿಸ್ ಬಸ್ಸುಗಳು ಸರ್ವಿಸ್ ರೋಡ್‌ನಲ್ಲಿ ಚಲಿಸಬೇಕೆಂಬ ಕಾನೂನು ಇದ್ದರೂ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ರಾಜ್ಯ ಹೆದ್ದಾರಿಯಲ್ಲೇ ಹೋಗುತ್ತದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕೆಎಸ್ಆರ್ಟಿಸಿ ಯ ಗ್ರಾಮೀಣ ಸಾರಿಗೆಯಲ್ಲಿ ಇರುವ ಬಹುತೇಕ ಬಸ್ಸುಗಳು ಫಿಟ್ನೆಸ್, ಇನ್ಸೂರೆನ್ಸ್ ನವೀಕರಿಸದ ಬಸ್ಸುಗಳಾಗಿರುತ್ತದೆ. ಗ್ರಾಮೀಣ ಸಾರಿಗೆಗೆ ಹಳೆಯ ಬಸ್ಸುಗಳನ್ನೇ ಹಾಕುತ್ತಾರೆ. ಇದು ಗ್ರಾಮೀಣ ಭಾಗದ ಪ್ರಯಾಣಿಕರ ಜೀವದ ಮೇಲೆ ಮಾಡುತ್ತಿರುವ ಚೆಲ್ಲಾಟವಾಗಿರುತ್ತದೆ.

 ಈ ಘಟನೆಯ ಸಂಪೂರ್ಣ ಜವಾಬ್ದಾರಿಯನ್ನು ಕರ್ನಾಟಕ ಸರಕಾರ ಹೊತ್ತುಕೊಂಡು ಮೃತರ ಕುಟುಂಬಕ್ಕೆ ತಲಾ ಒಂದು‌ ಕೋಟಿ ರೂಪಾಯಿಗಳ ಪರಿಹಾರ, ಗಾಯಗೊಂಡವರಿಗೆ ಐವತ್ತು ಲಕ್ಷಗಳ ಪರಿಹಾರವನ್ನು ತಕ್ಷಣ ನೀಡಬೇಕು, ಅದಲ್ಲದೆ ಕಳಪೆ ಗುಣಮಟ್ಟದ, ಸಂಚಾರ ಯೋಗ್ಯವಲ್ಲದ ಬಸ್ಸುಗಳನ್ನು ಕೂಡಲೇ ಸೇವೆಯಿಂದ ಹಿಂಪಡೆಯಬೇಕು ಎಂದು ಸಾರಿಗೆ ಸಚಿವರನ್ನು ಮಾಧ್ಯಮದ ಮೂಲಕ ಒತ್ತಾಯಿಸುತ್ತೇನೆ

 ನೌಷದ್ ದೊಂತಿಲ ಅಧ್ಯಕ್ಷರು ಸೋಶಿಯಲ್ ಡೆಮಾಕ್ರಟಿಕ್ ಆಟೋ ಯೂನಿಯನ್ ನೆಲ್ಯಾಡಿ

m

Related Posts