ವಿಶಿಷ್ಟ ಸಾಧನೆಗೈದ ವಿದ್ಯಾರ್ಥಿಗಳಿಗೆ ಮೀಲಾದ್ ವೇದಿಕೆಯಲ್ಲಿ ಸನ್ಮಾನ

ಮಂಡೆಕೋಲು: ಸ್ಥಳೀಯ SKSSF ಮಂಡೆಕೋಲು ಶಾಖೆಯ ವತಿಯಿಂದ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಮದ್ರಸ, SSLC, PUC ಮತ್ತು ಪದವಿ ವಿಭಾಗಗಳಲ್ಲಿ ವಿಶಿಷ್ಟ ಶೈಕ್ಷಣಿಕ ಸಾಧನೆ ಮಾಡಿರುವ ಒಟ್ಟು 16 ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರನ್ನು ಗುರುತಿಸಿ, ಪ್ರತಿಭಾ ಪುರಸ್ಕಾರ ನೀಡಲಾಯಿತು

07/09/2025ರಂದು, ಮೀಲಾದ್ ಪ್ರಯುಕ್ತ ನಡೆದ ನೂರೆ ಮದೀನಾ ಫೆಸ್ಟ್‌ನ ಅಂಗವಾಗಿ ಕುವ್ವತುಲ್ ಇಸ್ಲಾಂ ಮದ್ರಸ ಸಭಾಂಗಣದಲ್ಲಿ ಆಯೋಜಿಸಲಾಗಿದ್ದು, ಪ್ರತಿಭಾವಂತರಿಗೆ ಪ್ರಶಂಸಾಪತ್ರವನ್ನು ನೀಡಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ SYS ಹಾಗೂ SKSSF ಮಂಡೆಕೋಲು ಶಾಖೆಯ ನಾಯಕರು ಪ್ರಶಂಸನಾ ಪತ್ರಗಳನ್ನು ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿ, ಅವರ ಭವಿಷ್ಯಕ್ಕೆ ಶುಭ ಹಾರೈಸಿದರು.





m

