ಸುಳ್ಯ, ಸೆ.5: ಅಲ್ ಹುದಾ ಹನಫಿ ಜಾಮಿಯಾ ಮಸ್ಜಿದ್ ಅಂಬಟಡ್ಕದಲ್ಲಿ ಈದ್ ಮೀಲಾದ್ ಕಾರ್ಯಕ್ರಮ ಜರುಗಿತು.
ಜುಮಾ ನಮಾಝ್ ಬಳಿಕ ಹೊಸಮುದ್ದೀನ್ ಹಜರತ್ ಉಪ್ಪಳ ನೇತೃತ್ವದಲ್ಲಿ ಮೌಲೀದ್ ಪಾರಾಯಣಯಾಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಂಜೆ ಗಂಟೆ 5:00ಕ್ಕೆ ಉದ್ಘಾಟನಾ ಕಾರ್ಯಕ್ರಮ ಜರುಗಿತು ಇಮಾಮ್ ಅಬ್ದುಲ್ ಖಾದಿರ್ ಸಖಾಫಿ ಅಲ್ ಕಾಮಿಲಿ ಮುದುಗುಡ, ಮೊಗರ್ಪಣೆ ಸುಳ್ಯ ಆಶಿರ್ವಚನ ಹಾಗೂ ಪ್ರವಾದಿ ಸಂದೇಶದೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು.
ಇಮಾಮ್ ನಯಿಮ್ ಮುಸ್ತಕ್ ಹಜ್‌ರತ್ ಕೂರ್ನಡ್ಕ ಪುತ್ತೂರು ಮುಖಾಂತರ ಇಕ್ರಾ ಮದರಸ ಮಕ್ಕಳಿಗೆ ಇಸ್ಲಾಮಿಕ್ ಸಾಂಸ್ಕೃತಿಕ ಕಲಾ ಕಾರ್ಯಕ್ರಮ ಜರುಗಿತು.
ಮಗ್ರಿಬ್ ನಮಾಝ್ ಬಳಿಕ 7:00ಕ್ಕೆ ತಕೀರ್ ಅಫಿಸ್ ಇಮಾಮ್ ಮೊಹಮ್ಮದ್ ರಿಜ್ವಾನ್ ಕೇಪು, ಕಡಬ ಇವರು ಪ್ರವಾದಿ ಸಂದೇಶ ಹಾಗೂ ದುವಾಶಿರ್ವಚನ ನೆರವೇರಿಸಿದರು.
ಹಾಜಿ ಅಬ್ದುಲ್ ಖಾದರ್ ಪಾರೆ , ಹಾಗೂ ಮೂಸ ಡೆಲ್ಲಿ ಉಪಸ್ಥಿತರಿದ್ದರು.





m
