Featured, ಇತರೆ

ಸಂಪಾಜೆ–ಪೇರಡ್ಕ ಮತ್ತು ಅರಂತೋಡು ಮಸೀದಿ, ಮದರಸಗಳ ಅಭಿವೃದ್ಧಿಗೆ ವಕ್ಫ್ ಇಲಾಖೆಯಿಂದ ₹20 ಲಕ್ಷ ಅನುದಾನ ಮಂಜೂರು

ಶಹೀದ್ ತೆಕ್ಕಿಲ್ ಶಿಫಾರಸಿನ ಮೇರೆಗೆ ಸಚಿವ ಯು.ಟಿ. ಖಾದರ್ ಅವರಿಂದ ಅನುದಾನ ಬಿಡುಗಡೆ

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಗೂನಡ್ಕ–ಪೇರಡ್ಕ ಹಾಗೂ ಅರಂತೋಡು ಪ್ರದೇಶದ ಮಸೀದಿ ಮತ್ತು ಮದರಸಗಳ ಅಭಿವೃದ್ಧಿ ಹಾಗೂ ನವೀಕರಣ ಕಾಮಗಾರಿಗಳಿಗೆ ಕರ್ನಾಟಕ ಸರಕಾರದ ವಕ್ಫ್ ಇಲಾಖೆಯಿಂದ ಒಟ್ಟು ₹20 ಲಕ್ಷ ಅನುದಾನ ಮಂಜೂರಾಗಿದೆ.

ಸಂಪಾಜೆ ಗ್ರಾಮದ ಗೂನಡ್ಕ–ಪೇರಡ್ಕ ಮುಹಿದ್ದೀನ್ ಜುಮಾ ಮಸೀದಿಯ ನವೀಕರಣಕ್ಕೆ ₹5 ಲಕ್ಷ, ತೆಕ್ಕಿಲ್ ಮೊಹಮ್ಮದ್ ಹಾಜಿ ಮೆಮೋರಿಯಲ್ ತಖ್ವಿಯತ್ತುಲ್ ಇಸ್ಲಾಂ ಮದರಸ ಪೇರಡ್ಕದ ದುರಸ್ತಿ ಕಾರ್ಯಕ್ಕೆ ₹5 ಲಕ್ಷ ಅನುದಾನ ನೀಡಲಾಗಿದೆ.

ಅದೇ ರೀತಿ, ಅರಂತೋಡು ಬದ್ರಿಯಾ ಜುಮಾ ಮಸೀದಿಯ ನವೀಕರಣಕ್ಕೆ ₹5 ಲಕ್ಷ ಹಾಗೂ ನುಸ್ರತುಲ್ ಇಸ್ಲಾಂ ಮದರಸ ಕಟ್ಟಡ ಕಾಮಗಾರಿಗೆ ₹5 ಲಕ್ಷ ಅನುದಾನ ಮಂಜೂರಾಗಿದೆ.

ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿಯ ಸಚಿವ ದರ್ಜೆ ಅಧ್ಯಕ್ಷರಾದ ಟಿ.ಎಂ. ಶಹೀದ್ ತೆಕ್ಕಿಲ್ ಅವರ ಶಿಫಾರಸಿನ ಮೇರೆಗೆ, ರಾಜ್ಯದ ವಕ್ಫ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ಈ ಅನುದಾನವನ್ನು ಮಂಜೂರುಗೊಳಿಸಿದ್ದಾರೆ.

ಅನುದಾನ ಮಂಜೂರಾತಿಗೆ ಪೇರಡ್ಕ ಗೂನಡ್ಕ ಮಸೀದಿಯ ಅಧ್ಯಕ್ಷರಾದ ಪಿ.ಕೆ. ಉಮ್ಮರ್ ಹಾಗೂ ಅರಂತೋಡು ಮಸೀದಿಯ ಅಧ್ಯಕ್ಷರಾದ ಅಶ್ರಫ್ ಗುಂಡಿ ಅಭಿನಂದನೆ ಸಲ್ಲಿಸಿದ್ದಾರೆ.

Related Posts