ಮುಸ್ತಫಾ ಹೊಸಮರು ವಿನ್ನರ್, ಮಶ್ರೀಫ ಉಜಿರೆ ದ್ವಿತೀಯ
ಸೆ.7 ಸುಳ್ಯ: HR-STORIES2K21 ಯೂಟ್ಯೂಬ್ ಚಾನಲ್ ವತಿಯಿಂದ ಆಯೋಜಿಸಲ್ಪಟ್ಟಿದ್ದ ಆನ್ಲೈನ್ ಮೀಳಾದುನ್ನಬಿ (ಸ.ಅ.ವ) ಮದ್ಹ್ ಗೀತೆ ಗಾಯನ ಸ್ಪರ್ಧೆಯಲ್ಲಿ ಕಾರ್ಕಳದ ಮುಸ್ತಫಾ ಹೊಸಮರು ವಿಜೇತರಾದರು.
ಯೂಟ್ಯೂಬ್ ಚಾನಲ್ ಮೂಲಕ ನಡೆದ ಈ ಮುಕ್ತ ಗಾಯನ ಸ್ಪರ್ಧೆಗೆ ವಿವಿಧ ಪ್ರದೇಶದ ಪ್ರತಿಭಾನ್ವಿತರು ಭಾಗವಹಿಸಿದ್ದರು.
ಸ್ಪರ್ಧಿಗಳು ಕಳುಹಿಸಿದ ಹಾಡುಗಳನ್ನು ಯೂಟ್ಯೂಬ್ ಅಪ್ಲೋಡ್ ಮಾಡಿ, ಮದ್ಹ್ ಗೀತೆಗಳಿಗೆ ಪ್ರೇಕ್ಷಕರು ನೀಡಿದ ‘ಲೈಕ್ಸ್’ (ಮೆಚ್ಚುಗೆ) ಆದಾರದ ಮೇಲೆ ವಿಜೇತರನ್ನು ಆಯ್ಕೆ ಮಾಡಲಾಗಿದೆ.
ಈ ಸ್ಪರ್ಧೆಯಲ್ಲಿ ಮುಸ್ತಫಾ ಹೊಸಮರು ಅವರ ಗಾಯನ ಪ್ರತಿಭೆಗೆ ಸಿಗುವ ಅತ್ಯಧಿಕ ಮೆಚ್ಚುಗೆ (ಲೈಕ್ಸ್) ಪಡೆದುಕೊಂಡು ವಿಜಯಶ್ರೀ ತಮ್ಮದಾಗಿಸಿಕೊಂಡಿದ್ದಾರೆ.
ಮಶ್ರೀಫ ಉಜಿರೆ ಅವರು ಕೊನೆಯ ತನಕ ಕಠಿಣ ಸ್ಪರ್ಧೆ ನೀಡಿ ಯಶಸ್ವಿ ಪ್ರದರ್ಶನದೊಂದಿಗೆ ದ್ವಿತೀಯ ಸ್ಥಾನವನ್ನು ಗೆದ್ದುಕೊಂಡರು.
ಸ್ಪರ್ಧೆಯ ಆಯೋಜಕರು ವಿಜೇತರಿಗೆ ಅಭಿನಂದನೆಗಳನ್ನು ತಿಳಿಸಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಪ್ರತಿಭಾಶಾಲಿ ಗಾಯಕರನ್ನು ಕೂಡಾ ಪ್ರಶಂಸಿಸಿದ್ದಾರೆ. ಸ್ಪರ್ಧೆಯ ವಿಡಿಯೋಗಳು HR-STORIES2K21 ಯೂಟ್ಯೂಬ್ ಚಾನಲ್‌ನಲ್ಲಿ ವೀಕ್ಷಿಸಬಹುದು.





m
