Featured, ಅಂಕಣ, ಸ್ಥಳೀಯ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಹೊರಗುತ್ತಿಗೆ ನೌಕರರಿಗೆ ನೇರ ವೇತನ ನೀಡುವಂತೆ ಒತ್ತಾಯಿಸಿ ಪತ್ರ ಚಳುವಳಿ

 ದಿನಾಂಕ 6.10.2025 ರಂದು ಅಧ್ಯಕ್ಷರಾದ ರಾಮಚಂದ್ರ ಅವರ ನೇತೃತ್ವದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹೊರಗುತ್ತಿಗೆ ನೌಕರರ ಸಂಘ ದಿಂದ ಈ ಅಭಿಯಾನವು ಆರಂಭಿಸಲಾಗಿದೆ ಈಗಿರುವ ಏಜೆನ್ಸಿಗಳಿಂದ ದೊಡ್ಡಮಟ್ಟದ ಭ್ರಷ್ಟಾಚಾರವು ನಡೆಯುತ್ತಿದ್ದು ಹಾಗೂ ಕಾರ್ಮಿಕರ ದುಡಿಮೆಗೆ ಸರಿಯಾದ ವೇತನ ಸಿಗುತ್ತಿಲ್ಲವೆಂದು ಇದರಿಂದ ಬೇಸತ್ತು ನೌಕರರು ನೇರ ವೇತನ ಪಾವತಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ.

ಈ ಪತ್ರದಲ್ಲಿ ನೌಕರರು ಕಳೆದ 20 ವರ್ಷದಿಂದ ಸೇವೆ ಸಲ್ಲಿಸಿದ್ದೇವೆ. ನಮಗೆ ಯಾವುದೇ ಉದ್ಯೋಗ ಭದ್ರತೆ ಇಲ್ಲ ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ಸಿಗುತ್ತಿಲ್ಲ ನೌಕರಿಗೆ ಸಿಗಬೇಕಾದಂತ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ ಏಜೆನ್ಸಿಗಳಿಂದ ಭ್ರಷ್ಟಾಚಾರ ಹೆಚ್ಚಾಗಿರುವುದರಿಂದ ಮಾನ್ಯ ನಗರಾಭಿವೃದ್ಧಿ ಸಚಿವರಾದ ಡಿಕೆ ಶಿವಕುಮಾರ್ ಕೂಡಲೇ ಇದಕ್ಕೊಂದು ಶಾಶ್ವತ ಪರಿಹಾರ ನೀಡುವಂತೆ ಎಲ್ಲಾ ಹೊರಗುತ್ತಿಗೆ ನೌಕರರು ಪತ್ರ ಬರೆಯುವ ಮೂಲಕ ಚಳುವಳಿಯನ್ನು ಆರಂಭಿಸಿದ್ದಾರೆ ಒಂದು ವೇಳೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿದ್ದರೆ 2018ರಲ್ಲಿ ನಡೆದಂತೆ ದೊಡ್ಡ ಮಟ್ಟದ ಹೋರಾಟ ನಡೆಯುತ್ತದೆ ಎಂದು ಅಧ್ಯಕ್ಷರಾದ ರಾಮಚಂದ್ರ ರವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

m