ಸುಳ್ಯ ತಾಲೂಕು ನೂಜಿ ಬಾಳ್ತಿಲ ಗ್ರಾಮ ಬೊಳ್ಳಾಜೆ ಪ್ರದೇಶದಲ್ಲಿ ನಡೆದ ಅಪ್ರತೀಕ್ಷಿತ ಘಟನೆದಲ್ಲಿ ರಾಜೀವಿ ಎಂಬವರ ಮನೆಯ ಮೇಲೆ ಮರ ಬಿದ್ದು ಗಂಭೀರ ಹಾನಿ ಉಂಟಾಗಿದೆ. ಈ ಘಟನೆಗೆ ಸಂಬಂಧಿಸಿ ಇಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ರವರು ಸ್ಥಳಕ್ಕೆ ಭೇಟಿ ನೀಡಿ ಹಾನಿಗೊಳಗಾದ ಮನೆಯನ್ನು ಪರಿಶೀಲಿಸಿದರು.
ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಚಂದ್ರಾವತಿ ಜಾಲು, ಉಪಾಧ್ಯಕ್ಷ ಶ್ರೀ ಚಂದ್ರಶೇಖರ್ ಹಳೆನೂಜಿ, ಸದಸ್ಯೆ ಶ್ರೀಮತಿ ವಿನಯ ಬಳಕ್ಕ, ಮಾಜಿ ಸದಸ್ಯೆ ಶ್ರೀಮತಿ ರಜಿತಾ ಕೇಪುಂಜ, ಹಾಗೂ ಶ್ರೀ ಉಮೇಶ್ ಶೆಟ್ಟಿ ಸಾಯಿರಾಂ, ಶ್ರೀ ದುರ್ಗಾಪ್ರಸಾದ್ ಕೆ.ಎ., ಶ್ರೀ ಜಯಂತ್ ಕಲ್ಲುಗುಡ್ಡೆ, ಶ್ರೀ ಪ್ರಭಾಕರ ಬಳಕ್ಕ, ಮತ್ತು ಮನೆಯವರಾದ ರಾಮಣ್ಣ, ಕೃಷ್ಣಪ್ಪ, ಶ್ರೀಮತಿ ರಾಜೀವಿ ಸೇರಿದಂತೆ ಅನೇಕರು ಹಾಜರಿದ್ದರು.
ಶಾಸಕಿ ಭಾಗೀರಥಿ ಮುರುಳ್ಯ ಅವರು ಹಾನಿಗೊಳಗಾದ ಕುಟುಂಬಕ್ಕೆ ಸಮಾಧಾನ ತಿಳಿಸಿ ಸರ್ಕಾರದ ಮಟ್ಟದಲ್ಲಿ ನೆರವು ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.




m
