ಅಖಿಲ ಭಾರತ ಮಹಿಳಾ ಸಮನ್ವಯ ಸಭೆ ಹಾಗೂ ಕಾರ್ಯಾಗಾರವು ಅಕ್ಟೋಬರ್ 12ರಿಂದ 14ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.
ಮಹಿಳಾ ಶಕ್ತಿ, ಸಂಘಟನೆ ಮತ್ತು ಸಮಾಜಸೇವೆಯ ಕ್ಷೇತ್ರಗಳಲ್ಲಿ ಮಹಿಳೆಯರ ಪಾತ್ರವನ್ನು ಬಲಪಡಿಸುವ ಉದ್ದೇಶದಿಂದ ಈ ಸಭೆ ನಡೆಯುತ್ತಿದ್ದು, ದೇಶದ ನಾನಾ ಭಾಗಗಳಿಂದ ಪ್ರಮುಖ ಮಹಿಳಾ ಪ್ರತಿನಿಧಿಗಳು, ಸಂಘಟನಾ ಕಾರ್ಯಕರ್ತೆಯರು ಹಾಗೂ ಮಾರ್ಗದರ್ಶಕರು ಭಾಗವಹಿಸಲಿದ್ದಾರೆ.. ಈ ರೀತಿಯ ಸಭೆಯನ್ನು ವಾರ್ಷಿಕವಾಗಿ ನಡೆಸಲಾಗುತ್ತದೆ. ಈ ವರ್ಷ ಈ ಸಭೆ ಮತ್ತು ಕಾರ್ಯಾಗಾರ ಬೆಂಗಳೂರಿನ ಚನ್ನೇನಹಳ್ಳಿಯಲ್ಲಿರುವ ಜನಸೇವಾ ವಿದ್ಯಾಕೇಂದ್ರದಲ್ಲಿ ನಡೆಯಲಿದೆ.ಈ ವರ್ಷ ಈ ಸಭೆಯು ಆರ್‌ಎಸ್‌ಎಸ್ ಸರಸಂಘಚಾಲಕ್ ಮೋಹನ್ ಭಾಗವತ್, ಸರ್ಕಾರಿವಾಹ ದತ್ತಾತ್ರೇಯ ಹೊಸಬಾಳೆ ಮತ್ತು ಅಖಿಲ ಭಾರತ ಕಾರ್ಯಕಾರಿ ಸದಸ್ಯ ಭಯ್ಯಾಜಿ ಜೋಶಿ ಅವರ ಮಾರ್ಗದರ್ಶನ ಮತ್ತು ಸಹಭಾಗಿತ್ವವನ್ನು ಪಡೆಯಲಿದೆ.
ಈ ಸಭೆಯಲ್ಲಿ ಮಹಿಳೆಯರ ಬಗ್ಗೆ ಭಾರತೀಯ ಚಿಂತನೆ, ವಿವಿಧ ಸಂಘಟನೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ಮತ್ತು ಮಹಿಳೆಯರಲ್ಲಿ ಸಾಮಾಜಿಕ ನಾಯಕತ್ವವನ್ನು ಸ್ಥಾಪಿಸುವುದರ ಕುರಿತು ಚರ್ಚಿಸಲಾಗುವುದು. ಮಹಿಳಾ ಸಮಸ್ಯೆಗಳ ಕುರಿತು ಪ್ರಸ್ತುತ ಪರಿಸ್ಥಿತಿ, ಮಹಿಳಾ ಚರ್ಚೆ ಮತ್ತು ಅಗತ್ಯ ಕ್ರಮಗಳ ಬಗ್ಗೆಯೂ ಚರ್ಚಿಸಲಾಗುವುದು.





m
