Featured, ಅಂಕಣ, ಸ್ಥಳೀಯ

ಪಂಜಾಬ್ ರೀತಿಯಲ್ಲಿ ರಾಜ್ಯದ ರೈತರಿಗೂ ಪ್ರತಿ ಎಕರೆಗೆ .20 ಸಾವಿರ ರೂ. ಪರಿಹಾರ ನೀಡಲು ಆಪ್ ಒತ್ತಾಯ

ಪಂಜಾಬ್ ರಾಜ್ಯದಲ್ಲಿನ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಭಗವಂತ ಮಾನ್ ಸರ್ಕಾರವು ಅತಿವೃಷ್ಟಿಗೆ ಒಳಗಾಗಿ ಬೆಳೆ ಹಾನಿಯಾದ ರೈತರ ಜಮೀನುಗಳಿಗೆ ಘೋಷಿಸಿರುವಂತೆ ರಾಜ್ಯದ ರೈತರಿಗೂ ಸಹ ಪ್ರತಿ ಎಕರೆಗೆ 20 ಸಾವಿರ ರೂ.ಗಳ ಪರಿಹಾರ ಧನವನ್ನು ನೀಡಬೇಕೆಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ. 

ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ರಾಜ್ಯ ಸರ್ಕಾರವು ಹೆಕ್ಟೇರ್ ಲೆಕ್ಕದಲ್ಲಿ ಘೋಷಿಸಿರುವ 17,000 ಮತ್ತು 25,000 ರೂ.ಗಳು ಅರೆಕಾಸಿನ ಮಜ್ಜಿಗೆಯಂತಿದೆ. ಉತ್ತರ ಕರ್ನಾಟಕದ ರೈತರುಗಳು ಖಾಸಗಿಯವರಿಂದ ಸಾಲಗಳನ್ನು ಮಾಡಿ ಅತಿವೃಷ್ಟಿಯಿಂದಾದ ಅನಾಹುತಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಬಂದಿದೆ. ಸರ್ಕಾರ ನೀಡುವ ಪರಿಹಾರದಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರುಗಳನ್ನು ಪಾರು ಮಾಡಲು ಸಾಧ್ಯವೇ ಇಲ್ಲ. 

ಪಂಜಾಬ್ ಸರ್ಕಾರವು ಕ್ಷಿಪ್ರಗತಿಯಲ್ಲಿ ವೈಜ್ಞಾನಿಕವಾಗಿ ಸಮೀಕ್ಷೆಗಳನ್ನು ಪೂರ್ಣಗೊಳಿಸಿ ದೇಶದಲ್ಲಿಯೇ ಅತಿ ಹೆಚ್ಚಿನ ಪರಿಹಾರ ಧನವನ್ನು ಘೋಷಿಸಿದೆ. ರಾಜ್ಯದಲ್ಲಿ ಇದುವರೆಗೂ ಜಂಟಿ ಸಮೀಕ್ಷೆ ಕಾರ್ಯ ಪೂರ್ಣ ಗೊಂಡಿಲ್ಲ. ಕೃಷಿ ಅಧಿಕಾರಿಗಳ ನಿಧಾನ ಗತಿಯ ಸರ್ವೆ ಕಾರ್ಯಗಳನ್ನು ನೋಡಿದರೆ ಮೂರ್ನಾಲ್ಕು ತಿಂಗಳುಗಳಾದರೂ ಮುಗಿಯುವುದಿಲ್ಲ. ಆದರೆ ಕೃಷಿ ಸಚಿವರು ಪರಿಹಾರವನ್ನು ಮಾತ್ರ ಈಗಲೇ ಘೋಷಿಸಿದ್ದಾರೆ. ಯಾವ ರೀತಿ ರೈತರಿಗೆ ಈ ಅಲ್ಪ ಮೊತ್ತವು ತಲುಪಲು ಸಾಧ್ಯ ಎಂಬುದನ್ನು ಕೃಷಿ ಸಚಿವರು ಉತ್ತರಿಸಬೇಕಾಗಿದೆ. ಈ ರೀತಿಯ ಸೋಗಲಾಡಿತನ ವರ್ತನೆಯನ್ನು ಬಿಟ್ಟು ಕೂಡಲೇ ಮುಖ್ಯಮಂತ್ರಿಗಳು ಹಾಗೂ ಕೃಷಿ ಸಚಿವರು ಶೀಘ್ರ ಗತಿಯಲ್ಲಿ ಜಂಟಿ ಸರ್ವೆ ಕಾರ್ಯಗಳನ್ನು ಮುಗಿಸಿ ಪಂಜಾಬ್ ಸರ್ಕಾರದ ಮಾದರಿಯಲ್ಲಿ ಎಕರೆಗಳಲ್ಲಿ ಪರಿಹಾರ ಧನವನ್ನು ಮರು ಘೋಷಿಸಬೇಕೆಂದು ಜಗದೀಶ್ ವಿ. ಸದಂ ಆಗ್ರಹಿಸಿದ್ದಾರೆ.

ಜಗದೀಶ್ ವಿ. ಸದಂ  ರಾಜ್ಯ ಮಾಧ್ಯಮ ಸಂಚಾಲಕರು ಸಂಪರ್ಕ : 9591199556

Related Posts