ಸ್ಥಳೀಯ

ಸವಣೂರಿನಲ್ಲಿ ಎಸ್‌ಡಿಪಿಐ ವತಿಯಿಂದ 77ನೇ ಗಣರಾಜ್ಯೋತ್ಸವ ಆಚರಣೆ

ಸವಣೂರು: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಸವಣೂರು ಗ್ರಾಮ ಸಮಿತಿಯ ವತಿಯಿಂದ ಭಾರತದ 77ನೇ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವನ್ನು ಸವಣೂರು ಜಂಕ್ಷನ್‌ನಲ್ಲಿ ಆಚರಿಸಲಾಯಿತು.

ಚಾಪಲ್ಲ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾದ ಮಹಮ್ಮದ್ ಹಾಜಿ ಕಣಿಮಜಲ್ ಅವರು ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಪಿಐ ಸವಣೂರು ಗ್ರಾಮ ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಕೆನರಾ ವಹಿಸಿದ್ದರು.

ಎಸ್‌ಡಿಪಿಐ ಬೆಳ್ಳಾರೆ ಬ್ಲಾಕ್ ಅಧ್ಯಕ್ಷರಾದ ರಫೀಕ್ ಎಂ.ಎ. ಗಣರಾಜ್ಯೋತ್ಸವದ ಸಂದೇಶ ಭಾಷಣ ಮಾಡಿದರು. ದಕ್ಷಿಣ ಕನ್ನಡ ಗ್ರಾಮಾಂತರ ಜಿಲ್ಲಾ ಸಮಿತಿ ಸದಸ್ಯರಾದ ಸಿದ್ದೀಕ್ ಅಲೆಕ್ಕಾಡಿ ಅವರು ನೆರೆದಿದ್ದವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ರಝಾಕ್ ಕೆನರಾ ಅತಿಥಿ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ಬಾಬು ಎನ್, ಚಾಪಲ್ಲ ಬದ್ರಿಯಾ ಮಸೀದಿಯ ಆಡಳಿತ ಸಮಿತಿ ಸದಸ್ಯರಾದ ಕಾಸಿಂ ಹಾಜಿ ಹಾಗೂ ಮಾಜಿ ಸದಸ್ಯರಾದ ಆಮೂ ಹಾಜಿ, ಪಣೆಮಜಲ್ ರಹ್ಮಾನಿಯ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಹಂಝ ಸರ್ವೆ, ಆಡಳಿತ ಸಮಿತಿ ಸದಸ್ಯರಾದ ಶಂಸುದ್ದೀನ್ ಹಾಜಿ ಸರ್ವೆ, ಯೂಸುಫ್ ಹಾಜಿ ಬೇರಿಕೆ, ಸುಲೈಮಾನ್ ಪಲ್ಲತಮೂಲೆ, ಅಶ್ರಫ್ ಸರ್ವೆ, ರಫೀಕ್ ಪಣಮಜಲ್, ಅಲ್ ಇಹ್ಸನ್ ಯೂತ್ ಕೌನ್ಸಿಲ್ ಅಧ್ಯಕ್ಷ ಬಶೀರ್ ಕೆನರಾ, ಅಲ್ ನಜಾತ್ ಮುಸ್ಲಿಂ ಯೂತ್ ಫೆಡರೇಷನ್ ಅಧ್ಯಕ್ಷ ಅಬ್ದುಲ್ ರಹಮಾನ್ ಸರ್ವೆ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.

ಎಸ್‌ಡಿಪಿಐ ಗ್ರಾಮ ಸಮಿತಿ ಕಾರ್ಯದರ್ಶಿ ಅಶ್ರಫ್ ಜನತಾ ಅತಿಥಿಗಳನ್ನು ಸ್ವಾಗತಿಸಿದರು. ಬೆಳ್ಳಾರೆ ಬ್ಲಾಕ್ ಸಂಘಟನಾ ಕಾರ್ಯದರ್ಶಿ ರಫೀಕ್ ಪಣೆಮಜಲ್ ವಂದಿಸಿದರು.

Related Posts