Featured, ಅಂಕಣ, ಸ್ಥಳೀಯ

ಮುನವ್ವಿರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದ್ರಸ ಗಾಂಧಿನಗರ,ಸುಳ್ಯ

ಹೊಸ ಹುರುಪುನೊಂದಿಗೆ ಮತ್ತೊಂದು ಫತ್ಹೇ ಮುಬಾರಕ್

ದಿನಾಂಕ 29-03-2026 ಆದಿತ್ಯವಾರ ದಂದು ಮುಹಿಯದ್ದೀನ್ ಜುಮಾ ಮಸ್ಜಿದ್ & ತರ್ಬಿಯತುಲ್ ಇಸ್ಲಾಂ ಜಮಾ ಅತ್ ಕಮಿಟಿ ಅಧ್ಯಕ್ಷರಾದ ಹಾಜಿ KMS ಮುಹಮ್ಮದ್ ರವರ ಅಧ್ಯಕ್ಷತೆಯಲ್ಲಿ ಸಯ್ಯಿದ್ APS ಹುಸೈನ್ ಅಲ್ ಅಹ್ದಲ್ ಆದೂರ್ ರವರ ನೇತೃತ್ವದಲ್ಲಿ 2026 -27 ಸಾಲಿನ ಮದ್ರಸ ಫತ್ಹೇ ಮುಬಾರಕ್ ನೊಂದಿಗೆ ಅಧಿಕೃತವಾಗಿ ಚಾಲನೆ ಗೊಂಡಿತು.

ಕಾರ್ಯಕ್ರಮದಲ್ಲಿ ಮಸೀದಿ ಮುಅಝ್ಝಿನ್ ಉಸ್ತಾದರಾದ ಶಮೀಲ್ ಫಾಳಿಲಿ ದುಆ ನೆರವೇರಿಸಿದರು. ಮುನವ್ವಿರುಲ್ ಇಸ್ಲಾಂ ಮದ್ರಸ ಸದರ್ ಉಸ್ತಾದರಾದ ಸಿರಾಜುದ್ದೀನ್ ಸಖಾಫಿ ಚಿಕ್ಕಮಗಳೂರು ಧಾರ್ಮಿಕ ವಿದ್ಯೆಯ ಮೂಲ್ಯವನ್ನು ಸವಿಸ್ತಾರವಾಗಿ ವಿವರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದರು. ಇರ್ಫ಼ಾನ್ ಹಿಮಮಿ ನೆರೆದಿರುವ ಸರ್ವರಿಗೂ ಉಪಯುಕ್ತ ಉಪದೇಶ ನೀಡಿದರು ಇರ್ಫಾನ್ ಸ ಅದಿ ಸುಂದರವಾಗಿ ಬೈತ್ ಆಲಾಪಿಸಿದರು. ಕಾರ್ಯಕ್ರಮದಲ್ಲಿ ತರ್ಬಿಯತುಲ್ ಇಸ್ಲಾಂ ಜಮಾ ಅತ್ ಕಮಿಟಿ ಕಾರ್ಯದರ್ಶಿ ಹಾಜಿ I ಇಸ್ಮಾಯಿಲ್ ಕೋಶಾಧಿಕಾರಿಯಾದ ಹಾಜಿ S M ಅಬ್ದುಲ್ ಹಮೀದ್ ಉಪಾಧ್ಯಕ್ಷರಾದ ಅಬ್ದುಲ್ ಹಮೀದ್ ಬೀಜಕೋಚ್ಚಿ ನೀರ್ದೇಶಕರಾದ ಹಮೀದ್ ಕುತ್ತಮೋಟ್ಟೆ ,ಹಾಜಿ ಅಬ್ದುಲ್ ಗಪ್ಫಾರ್, ಉಮ್ಮರ್ KS ,ಹಾಜಿ ಯಾಕೂಬ್ ,ಸಿದ್ದೀಕ್ ಕೊಡಿಯಮ್ಮ ಹಾಗೂ ಅನ್ಸಾರುಲ್ ಮುಸ್ಲೀಮೀನ್ ಅಧ್ಯಕ್ಷರಾದ ಹಾಜಿ ಅಬ್ದುಲ್ಲಾ ಕಟ್ಟೆಕ್ಕಾರ್ಸ್ ಹಾಗೂ ಮುಹಿಯ್ಯದ್ದೀನ್ ಫ್ಯಾನ್ಸಿ ರವರು ಅತಿಥಿಗಳಾಗಿ ಹಾಗೂ ಮದ್ರಸ ಅಧ್ಯಾಪಕರು ವಿದ್ಯಾರ್ಥಿಗಳು ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಅಬೂಬಕ್ಕರ್ ಸಖಾಫಿ ಸ್ವಾಗತಿಸಿ ರಿಯಾನ್ ಸ ಅದಿ ವಂದಿಸಿದರು.

m