ಸುಳ್ಯ: ಬದ್ರಿಯಾ ಜುಮ್ಮಾ ಮಸೀದಿ ಗುತ್ತಿಗಾರು ಇದರ ಅಧೀನದಲ್ಲಿ ಕಾರ್ಯಚರಿಸುತ್ತಿರುವ ನೂರುಲ್ ಇಸ್ಲಾಂ ಮದ್ರಸ ಗುತ್ತಿಗಾರು ಮದ್ರಸ ಪ್ರಾರಂಭೋತ್ಸವವು ಮಾರ್ಚ್ 29ರಂದು ಆದಿತ್ಯವಾರ ಮದ್ರಸ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಜಮಾಅತ್ ಅಧ್ಯಕ್ಷರಾದ ಹಾಜಿ ಅಬ್ದುಲ್ ಖಾದರ್ ಅಧ್ಯಕ್ಷತೆ ವಹಿಸಿದ್ದರು.N. I. M ಉಸ್ತುವಾರಿ ಕಮಿಟಿ ಕಾರ್ಯದರ್ಶಿ ಹಮೀದ್ ಹೆಚ್ಎಂ ಸ್ವಾಗತಿಸಿದರು, N I M ಉಸ್ತುವಾರಿ ಕಮಿಟಿ ಅಧ್ಯಕ್ಷರಾದ ಮುಫೀದ್ ಬಾಕಿಲ ಪ್ರಸ್ತಾವಿಕ ಮಾತುಗಳನ್ನಾಡಿದರು
ಬದ್ರಿಯಾ ಜುಮ್ಮಾ ಮಸೀದಿ ಖತೀಬ್ ಸುಲೈಮಾನ್ ಸಅದಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮದ್ರಸ ಶಿಕ್ಷಣದ ಮಹತ್ವವನ್ನು ವಿವರಿಸಿದರು. ಮುಅಲ್ಲಿಮರಾದ ಸಾದಿಕ್ ಫಾಳಿಲಿ ಉಸ್ತಾದ್ ಹಿತವಚನ ನೀಡಿದರು ಕಾರ್ಯಕ್ರಮದಲ್ಲಿ ಮುಂದಿನ ವರ್ಷದ ಶಿಕ್ಷಣದ ಅಭಿವೃದ್ಧಿಯ ಕುರಿತು ಚರ್ಚಿಸಲಾಯಿತು ಎಲ್ಲಾ ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು





m
