Featured, ಇತರೆ, ಸ್ಥಳೀಯ

SSLC ಫಲಿತಾಂಶ: ಸುಳ್ಯ ಸೇಂಟ್ ಜೋಸೆಫ್ ಶಾಲೆಯ ತಂಝಿಲಾ ಜಿ. ಹೆಚ್‌ಗೆ ಡಿಸ್ಟಿಂಕ್ಷನ್

ಸುಳ್ಯ, ಏಪ್ರಿಲ್ 23:
ಇದೀಗ ಪ್ರಕಟಗೊಂಡ SSLC ಪರೀಕ್ಷೆಯ ಫಲಿತಾಂಶದಲ್ಲಿ ಸುಳ್ಯ ಸೇಂಟ್ ಜೋಸೆಫ್ ಶಾಲೆಯ ವಿದ್ಯಾರ್ಥಿನಿ ಸುಳ್ಯ ಹಳೆಗೇಟು ನಿವಾಸಿಯಾದ ತಂಝಿಲಾ ಜಿ. ಹೆಚ್ ಅವರು ಗಮನಾರ್ಹ ಸಾಧನೆ ಮಾಡಿದ್ದಾರೆ.
625 ಅಂಕಗಳ ಪೈಕಿ 604 ಅಂಕಗಳನ್ನು ಗಳಿಸಿರುವ ಅವರು ಡಿಸ್ಟಿಂಕ್ಷನ್‌ನೊಂದಿಗೆ ತೇರ್ಗಡೆಯಾಗಿ ಶಾಲೆಗೆ ಕೀರ್ತಿ ತಂದಿದ್ದಾರ
ತಂಝಿಲಾ ಅವರು ಹಳೆಗೇಟು ನಿವಾಸಿಗಳಾದ ಹೈದರ್ ಕುಕ್ಕುಂಬಳ ಹಾಗೂ ತಾಹಿರಾ ಜಿ. ಹೆಚ್ ದಂಪತಿಗಳ ಪುತ್ರಿಯಾಗಿದ್ದಾರೆ.
ವಿದ್ಯಾರ್ಥಿನಿಯ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಸ್ಥಳೀಯರು ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದಾರೆ.

m