ಬೂತನಕಾಡು, ಮೇ 08 : ಬೂತನಕಾಡು ನೂರುಲ್ ಇಸ್ಲಾಂ ಮದ್ರಸದ SKSBV ವಿದ್ಯಾರ್ಥಿ ಒಕ್ಕೂಟದ ಚುನಾವಣೆಯು ಖತೀಬರಾದ ಉಸ್ಮಾನ್ ತನಾಝ್ ಮಅಬರಿ ಅಲ್ ಫೈಝಿ ಪೆರಾಜೆ ಅವರ ಮೇಲ್ವಿಚಾರಣೆಯಲ್ಲಿ ಸುಗಮ ಹಾಗೂ ಉತ್ಸಾಹಭರಿತವಾಗಿ ನಡೆಯಿತು.
ಚುನಾವಣಾ ರಂಗದಲ್ಲಿ ವಿದ್ಯಾರ್ಥಿಗಳ ಉತ್ಸಾಹ ತಾರಕ್ಕೇರಿದ್ದು, ಅಧ್ಯಕ್ಷ ಸ್ಥಾನಕ್ಕಾಗಿ ಮಹಮ್ಮದ್ ಶಯಾನ್ ಹಾಗೂ ಮಹಮ್ಮದ್ ಅನಸ್ ನಡುವೆ ತೀವ್ರ ಪೈಪೋಟಿ ಕಂಡುಬಂದಿತು. ಕಾರ್ಯದರ್ಶಿ ಹುದ್ದೆಗೆ ಮುಹಮ್ಮದ್ ಇಫ್ರಾಝ್ ಮತ್ತು ಮಹಮ್ಮದ್ ಅಫ್ಹಾಮ್ ನಡುವೆ ಕಣ ರಂಗೇರಿದರೆ, ಕೋಶಾಧಿಕಾರಿ ಸ್ಥಾನಕ್ಕಾಗಿ ಮಹಮ್ಮದ್ ಅಬೂ ತ್ವಾಹಿರ್ ಹಾಗೂ ಯೂಸುಫ್ ಅಹ್ಮದ್ ಅಲಿ ನಡುವೆ ಕುತೂಹಲಕಾರಿ ಸ್ಪರ್ಧೆ ನಡೆಯಿತು.
ಮತ ಎಣಿಕೆ ಪೂರ್ಣಗೊಂಡ ಬಳಿಕ ಘೋಷಿಸಲಾದ ಫಲಿತಾಂಶದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಹಮ್ಮದ್ ಶಯಾನ್ ಭರ್ಜರಿ ಬಹುಮತದೊಂದಿಗೆ ಗೆಲುವು ಸಾಧಿಸಿದರು. ಕಾರ್ಯದರ್ಶಿ ಹುದ್ದೆಗೆ ನಡೆದ ಕಠಿಣ ಪೈಪೋಟಿಯಲ್ಲಿ ಮುಹಮ್ಮದ್ ಇಫ್ರಾಝ್ ವಿಜಯಶಾಲಿಯಾದರೆ, ಕೋಶಾಧಿಕಾರಿ ಸ್ಥಾನಕ್ಕೆ ಮಹಮ್ಮದ್ ಅಬೂ ತ್ವಾಹಿರ್ ಮತದಾರರ ವಿಶ್ವಾಸ ಪಡೆದು ಆಯ್ಕೆಯಾದರು.
ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ವಿದ್ಯಾರ್ಥಿಗಳ ಸಂಭ್ರಮ ಮುಗಿಲುಮುಟ್ಟಿದ್ದು, ಮದ್ರಸಾ ಆವರಣದಲ್ಲಿ ಹರ್ಷೋದ್ಗಾರಗಳು ಮೊಳಗಿದವು.





m
