Featured, ರಾಜ್ಯ

ಮೈಸೂರು ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್: ವಿಜಯಲಕ್ಷ್ಮೀ ಅವರಿಗೆ ಚಿನ್ನದ ಪದಕ

ಮೈಸೂರು ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್: ವಿಜಯಲಕ್ಷ್ಮೀ ಅವರಿಗೆ ಚಿನ್ನದ ಪದಕ.

ಮೈಸೂರು, ಜುಲೈ 26:
ಮೈಸೂರು ಜಿಲ್ಲಾ ಪವರ್‌ಲಿಫ್ಟಿಂಗ್ ಅಸೋಸಿಯೇಷನ್ (ರಿ.) ವತಿಯಿಂದ ಜುಲೈ 25 ಮತ್ತು 26 ರಂದು ಮೈಸೂರಿನ ಭೀಮಾ ಫಿಟ್ನೆಸ್ ಜಿಮ್‌ನಲ್ಲಿ ನಡೆದ 5ನೇ ಪುರುಷರು ಹಾಗೂ 4ನೇ ಮಹಿಳೆಯರ ಸಬ್-ಜೂನಿಯರ್, ಜೂನಿಯರ್, ಸೀನಿಯರ್ ಮತ್ತು ಮಾಸ್ಟರ್ಸ್ ಕ್ಲಾಸಿಕ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್-2026ರಲ್ಲಿ ಮಹಿಳಾ ವಿಭಾಗದಲ್ಲಿ ವಿಜಯಲಕ್ಷ್ಮೀ ಅವರು ಗಮನಾರ್ಹ ಸಾಧನೆ ಮಾಡಿ ಚಿನ್ನದ ಪದಕ ಗೆದ್ದಿದ್ದಾರೆ.


ಈ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ಸ್ಪರ್ಧಿಗಳು ತಮ್ಮ ಶಕ್ತಿಯ ಪ್ರದರ್ಶನ ನೀಡಿ ಕಠಿಣ ಪೈಪೋಟಿ ನಡೆಸಿದರು. ಮಹಿಳೆಯರ ಕ್ಲಾಸಿಕ್ ಪವರ್‌ಲಿಫ್ಟಿಂಗ್ ವಿಭಾಗದಲ್ಲಿ ವಿಜಯಲಕ್ಷ್ಮೀ ಅವರು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಮೊದಲ ಸ್ಥಾನ ಪಡೆದು ಪ್ರಶಂಸೆಗೆ ಪಾತ್ರರಾದರು. ಕಾರ್ಯಕ್ರಮವನ್ನು ಭೀಮಾ ಫಿಟ್ನೆಸ್ ಜಿಮ್, ಮೈಸೂರು ಇವರಿಂದ ಆಯೋಜಿಸಲಾಗಿತ್ತು.

m