ಈ ಮನೆಯ ಹೆಣ್ಣು ಮಗಳ ಅಗಲಿಕೆಯ ನೋವನ್ನು ಮಾತುಗಳಿಂದ ತುಂಬಲು ಸಾಧ್ಯವಿಲ್ಲ. ಆದರೆ ದುಃಖದಲ್ಲಿರುವ ಕುಟುಂಬದ ಜೊತೆ ನಿಂತು ಸಾಂತ್ವನ ಹೇಳುವುದು, ಅವರಿಗಾಗಿ ಪ್ರಾರ್ಥಿಸುವುದು ಮತ್ತು ಮಾನವೀಯ ಬೆಂಬಲ ನೀಡುವುದು ನಮ್ಮ ಜಮಾಅತ್ ನ ಜವಾಬ್ದಾರಿಯಾಗಿದೆ”
ಆಲಿ ಹಾಜಿ ಕಲ್ಲುಗುಂಡಿ ಜಮಾಹತ್ ಅಧ್ಯಕ್ಷರು
ಸುಳ್ಯ: ಕಲ್ಲುಗುಂಡಿ ಇತ್ತೀಚೆಗೆ ಅಸಹಜವಾಗಿ ನಿಧನರಾದ ಮರ್ಹೂಮತ್ ನಿಶಾನಾ ಅವರ ಪುತ್ತೂರು ತಾಲೂಕಿನ ಕುಂಬ್ರ ಸಾರಪುಣಿ ನಿವಾಸಕ್ಕೆ ಮುಹ್ಯಿದ್ದೀನ್ ಜುಮಾ ಮಸೀದಿ, ಕಲ್ಲುಗುಂಡಿ ಜಮಾಅತ್ ಸಮಿತಿಯ ಸದಸ್ಯರು ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.
ದುಃಖದ ಭಾರದಿಂದ ಮನನೊಂದಿದ್ದ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ ಜಮಾಅತ್ ಪ್ರತಿನಿಧಿಗಳು, ಅಲ್ಲಾಹನು ಅವರಿಗೆ ಈ ನೋವನ್ನು ಸಹಿಸುವ ಶಕ್ತಿ, ಸಹನೆ ಮತ್ತು ಧೈರ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು. ಇದೇ ಸಂದರ್ಭದಲ್ಲಿ ಮರ್ಹೂಮತ್ ನಿಶಾನಾ ಅವರ ಮಘ್ಫಿರತ್‌ಗಾಗಿ ವಿಶೇಷ ದುಆ ಹಾಗೂ ಪ್ರಾರ್ಥನೆಯನ್ನು ಕಲ್ಲುಗುಂಡಿ ಮಸೀದಿಯ ಖತೀಬ್ ನೆರವೇರಿಸಿದರು.
ಭೇಟಿಯ ವೇಳೆ ಮೃತರ ಕುಟುಂಬದ ಸದಸ್ಯರೊಂದಿಗೆ ಕೆಲಕಾಲ ಮಾತುಕತೆ ನಡೆಸಿದ ಜಮಾಅತ್ ಸಮಿತಿಯ ಸದಸ್ಯರು, ಈ ದುಃಖದ ಘಳಿಗೆಯಲ್ಲಿ ಕುಟುಂಬವು ಏಕಾಂಗಿಯಲ್ಲ; ಜಮಾಅತ್‌ನ ಸಂಪೂರ್ಣ ನೈತಿಕ ಬೆಂಬಲ ಮತ್ತು ಸಹಕಾರ ಸದಾ ಅವರೊಂದಿಗಿರುತ್ತದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.




m
