Featured, ಅಂಕಣ, ಸ್ಥಳೀಯ

ವಿಮೆನ್ ಇಂಡಿಯಾ ಮೂವ್ಮೆಂಟ್(ವಿಮ್) ಸುಳ್ಯ ಅಸೆಂಬ್ಲಿ ಪ್ರತಿನಿಧಿ ಸಭೆ: ನೂತನ ಪದಾಧಿಕಾರಿಗಳ ಆಯ್ಕೆ

ಅಧ್ಯಕ್ಷೆಯಾಗಿ ಶಬೀನಾ ಎ.ಎಸ್ ಅಂಕತಡ್ಕ,ಉಪಾಧ್ಯಕ್ಷೆಯಾಗಿ ಮೀನಾಕ್ಷಿ ಬಂಬಿಲ ಆಯ್ಕೆ

ಸುಳ್ಯ:ಜು.27: ವಿಮೆನ್ ಇಂಡಿಯಾ ಮೂವ್‌ಮೆಂಟ್ ಸುಳ್ಯ ವಿಧಾನ‌ ಸಭಾ ಕ್ಷೇತ್ರದ ಅಸೆಂಬ್ಲಿ ಪ್ರತಿನಿಧಿ ಸಭೆಯು ಅಂಕತಡ್ಕದಲ್ಲಿ ಕ್ಷೇತ್ರಾಧ್ಯಕ್ಷೆಯಾದ ಶಬೀನಾ ಎ‌.ಎಸ್ ಅಂಕತ್ತಡ್ಕರವರ ಅಧ್ಯಕ್ಷತೆಯಲ್ಲಿ ನಡೆಯಿತು.

ವಿಮ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ ಅವರು ಚುನಾವಣಾ ‌ಪ್ರಕ್ರಿಯೆಯನ್ನು ನಡೆಸಿಕೊಟ್ಟು, ಪ್ರಸಕ್ತ ಸನ್ನಿವೇಷದಲ್ಲಿ ದೇಶದಲ್ಲಿ ನಡೆಯುವ ದೌರ್ಜನ್ಯ ರಾಜಕೀಯದಲ್ಲಿ ಮಹಿಳೆಯರ ಪಾತ್ರ ಹಾಗೂ ವಿಮ್ ನ ಕಾರ್ಯ ಚಟುವಟಿಕೆಗಳನ್ನು ವಿವರಿಸಿ ಮಾತನಾಡಿದರು.

ವಿಮ್ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ನೂತನ ಅಧ್ಯಕ್ಷೆಯಾಗಿ ಶಬೀನಾ‌‌ ಎ.ಎಸ್. ಅಂಕತಡ್ಕ, ‌ಉಪಾಧ್ಯಕ್ಷೆಯಾಗಿ ಮೀನಾಕ್ಷಿ ಬಂಬಿಲ, ಕಾರ್ಯದರ್ಶಿಯಾಗಿ ಶಮೀನಾ ಬೆಳ್ಳಾರೆ, ಜತೆ ಕಾರ್ಯದರ್ಶಿಯಾಗಿ ಸನಾ ಸುಳ್ಯ, ಕೋಶಾಧಿಕಾರಿಯಾಗಿ ರಶೀದಾ ಸವಣೂರು, ಸಮಿತಿ ಸದಸ್ಯರಾಗಿ ಹಸೀನಾ ಬೆಳ್ಳಾರೆ ಹಾಗೂ ರಮೀಝಾ ಪೆರಾಜೆ ಆಯ್ಕೆಯಾದರು. 

ಕಾರ್ಯಕ್ರಮದಲ್ಲಿ ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರಾಧ್ಯಕ್ಷರಾದ ಮಿರಾಝ್ ಸುಳ್ಯ, ಕಾರ್ಯದರ್ಶಿ ಸಯ್ಯದ್ ಆರೀಫ್ ಅಂಕತಡ್ಕ, ಸಮಿತಿ‌ ಸದಸ್ಯರಾದ ರಹಿಮಾನ್ ಬೆಳ್ಳಾರೆ ಉಪಸ್ಥಿತರಿದ್ದರು.ಶಮೀನಾ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.

m

Related Posts