ಆಗಸ್ಟ್ 15ರಂದು ಸುಳ್ಯದಲ್ಲಿ ಆಟಿ ಕೂಟ – 2026 ಆಮಂತ್ರಣ ಪತ್ರಿಕೆ ಬಿಡುಗಡೆ
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ “ಕಾಫಿಕೃಪಾ” ಕಟ್ಟಡ ರಾಜಸೀಟ್ ರಸ್ತೆ, ಮಡಿಕೇರಿ, ಜೇಸಿಐ ಸುಳ್ಯ ಪಯಸ್ವಿನಿ (ರಿ.) ಸುಳ್ಯ, ಸಂಧ್ಯಾಚೇತನ ಪ್ರವಾಸ ಬಳಗ ಸುಳ್ಯ ಇವರ ಆಶ್ರಯದಲ್ಲಿ “ಆಟಿ ಕೂಟ -2026′ ಆಟಿ ತಿಂಗಳ್ ನ ಆಚರಣೆಗ, ಜನಪದ ಪದ್ದತಿನ ನೆಂಪಿಸುವ ಜಂಬರ ಆಗಸ್ಟ್ 15ರಂದು ಸುಳ್ಯದ ಕನ್ನಡ ಭವನದಲ್ಲಿ ವಿವಿಧ ಆಟಿಕೂಟದ ಪಂತಗಳೊಟ್ಟಿಗೆ ಕಾರ್ಯಕ್ರಮ ನಡೆಯಲ್ಲಿದ್ದು, ಆಮಂತ್ರಣ ಪತ್ರಿಕೆಯನ್ನು ಜೇಸಿ ಭವನ ಸುಳ್ಯದಲ್ಲಿ ಘಟಕಾಧ್ಯಕ್ಷರಾದ ಜೆ. ಎಪ್. ಎಂ. ಲತಾಶ್ರೀ ಸುಪ್ರೀತ್ ಮೋಂಟಡ್ಕ ರವರ ಅಧ್ಯಕ್ಷತೆಯಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂಧರ್ಭದಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಚಂದ್ರಾವತಿ ಬಡ್ಡಡ್ಕ, ಜೇಸಿಐ ಸುಳ್ಯ ಪಯಸ್ವಿನಿಯ ನಿಕಟಪೂರ್ವ ಅಧ್ಯಕ್ಷರಾದ ಸುರೇಶ್ ಕಾಮತ್, ಪೂರ್ವಾಧ್ಯಕ್ಷರಾದ ನವೀನ್ ಕುಮಾರ್, ಗುರುಪ್ರಸಾದ್ ನಾಯಕ್, ಕಾರ್ಯದರ್ಶಿ ತಾರಾ ಮಾದವ ಚೂಂತಾರು, ಸದಸ್ಯರಾದ ರವಿಕುಮಾರ್ ಅಕ್ಕೋಜಿಪಾಲ್, ಶೊಭಾ ಅಶೋಕ್ ಚೂಂತಾರು, ಗೀತಾಂಜಲಿ ಗುರುರಾಜ್ ಸಾಮಾಜಿಕ ಮುಖಂಡರಾದ ಸುಪ್ರೀತ್ ಮೋಂಟಡ್ಕ ಮೊದಲಾದವರು ಉಪಸ್ಥಿತರಿದ್ದರು.





m


Scroll To Top