ಸುಳ್ಯದ ಗ್ರೀನ್ ವ್ಯೂ ಕ್ರೀಡಾಂಗಣದಲ್ಲಿ ಇಂಡಿಪೆಂಡೆನ್ಸ್ ಕಪ್ ಸೀಸನ್-2 ವಾಲಿಬಾಲ್ ಪಂದ್ಯಕೂಟಕ್ಕೆ ಅದ್ದೂರಿ ಚಾಲನೆ
“ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಕ್ರೀಡಾ ಪ್ರತಿಭೆ ಅಪಾರವಾಗಿದೆ : ಕೆ. ಎಂ. ಮುಸ್ತಫ
ಮುಂಗಾರು ವಾಲಿಬಾಲ್ ಅಕಾಡೆಮಿ, ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆ, ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಮತ್ತು ಮಲೆನಾಡು ಚಾರಿಟೇಬಲ್ ಟ್ರಸ್ಟ್ ಇವುಗಳ ಜಂಟಿ ಆಶ್ರಯದಲ್ಲಿ ಆಯೋಜಿಸಿರುವ ಸುಳ್ಯ ತಾಲೂಕು ಮಟ್ಟದ ಪ್ರೌಢಶಾಲಾ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಇಂಡಿಪೆಂಡೆನ್ಸ್ ಕಪ್ – ಸೀಸನ್ 2 ವಾಲಿಬಾಲ್ ಪಂದ್ಯಕೂಟಕ್ಕೆ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಕಾರ್ಯದರ್ಶಿ ಅಕ್ಷಯ್ ಕೆ. ಸಿ. ಚಾಲನೆ ನೀಡಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಕೆ. ಎಂ. ಮುಸ್ತಫ ವಹಿಸಿದ್ದರು. ಅವರು ಮಾತನಾಡಿ, _”ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಕ್ರೀಡಾ ಪ್ರತಿಭೆ ಅಪಾರವಾಗಿದೆ. ಇಂತಹ ಪಂದ್ಯಕೂಟಗಳು ವಿದ್ಯಾರ್ಥಿಗಳಲ್ಲಿ ದೈಹಿಕ ಸದೃಢತೆ, ತಂಡದ ಮನೋಭಾವ ಮತ್ತು ಶಿಸ್ತನ್ನು ಬೆಳೆಸುತ್ತದೆ. ಸುಳ್ಯ ತಾಲೂಕನ್ನು ರಾಜ್ಯಮಟ್ಟದಲ್ಲಿ ಕ್ರೀಡಾ ತಾಲೂಕಾಗಿ ಗುರುತಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮುಂದುವರಿಯುತ್ತದೆ”_ ಎಂದು ಹೇಳಿದರು.

ದ. ಕ. ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಉಪಾಧ್ಯಕ್ಷ ಎಸ್. ಸಂಶುದ್ದೀನ್, ಖಜಾoಚಿ ಇಬ್ರಾಹಿಂ ಗೂನಡ್ಕ,ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಾಮೊಟ್ಟೆ, ವರ್ತಕರ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್ ಜನತಾ, ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ಶ್ರೀಮತಿ ಲತಾ ಮಧು ಸೂದನ್, ಕಸ್ತೂರಿ ನರ್ಸರಿ ಮಧುಸೂದನ್ ಕುಂಭಕ್ಕೋಡ್, ಅಶೋಕ್ ಪ್ರಭು, ಡಾ. ರೇವಂತ್, ಉದ್ಯಮಿ ಹೇಮಂತ್ ಕುಮಾರ್, ಫೈಝಲ್ ಕಟ್ಟೆಕ್ಕಾರ್ಸ್, ವಾಲಿಬಾಲ್ ಅಸೋಸಿಯೇಷನ್ ಪದಾಧಿಕಾರಿಗಳಾದ ಇಬ್ರಾಹಿಂ ಕೆ. ಬಿ, ಶಾಫಿ ಕುತ್ತಾಮೊಟ್ಟೆ, ಅಬ್ದುಲ್ ರಝಕ್ ರಜ್ಜು ಬಯ್ಯ, ಜಯಪ್ರಕಾಶ್, ಮೊದಲಾದವರು ಉಪಸ್ಥಿತರಿದ್ದರು ಮಿರಾಜ್ ಗುರುoಪು ಸ್ವಾಗತಿಸಿ, ರಿಯಾಜ್ ಕಟ್ಟೆಕ್ಕಾರ್ಸ್ ವಂದಿಸಿದರು






m


Scroll To Top