ಇತರೆ

ತೆಕ್ಕಿಲ್ ಅಹಮದ್ ಕುಂಞಿ ನಿಧನ

ಸುಳ್ಯ: ಸಂಪಾಜೆ ಗ್ರಾಮದ ಪೇರಡ್ಕ–ಗೂನಡ್ಕ ನಿವಾಸಿ, ದಿವಂಗತ ತೆಕ್ಕಿಲ್ ಮೊಹಮ್ಮದ್ ಹಾಜಿ ಹಾಗೂ ಅರಂತೋಡು ಪಟೇಲ್ ಆಮಿನ ಹಜ್ಜುಮ್ಮ ದಂಪತಿಯ ಪ್ರಥಮ ಪುತ್ರ ತೆಕ್ಕಿಲ್ ಅಹಮದ್ ಕುಂಞಿ (86) ಅವರು ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪುತ್ರರಾದ ಭಶೀರ್ ತೆಕ್ಕಿಲ್, ಅಬ್ದುಲ್ ಖಾದರ್ ತೆಕ್ಕಿಲ್, ಮುಸ್ತಫ ತೆಕ್ಕಿಲ್, ಆರೀಫ್ ತೆಕ್ಕಿಲ್ ಹಾಗೂ ಸಫಿಯ ತೆಕ್ಕಿಲ್   ಸಹೋದರರಾದ ಟಿ.ಎಂ. ಬಾಬ ಹಾಜಿ ತೆಕ್ಕಿಲ್ (ಅರಂತೋಡು), ಟಿ.ಎಂ. ಮೂಸಾನ್ ಹಾಜಿ ತೆಕ್ಕಿಲ್ (ಗೂನಡ್ಕ) ಹಾಗೂ ಸಹೋದರಿಯರಾದ ಬೀಫಾತಿಮ ಅಬ್ಬಾಸ್ ತೆಕ್ಕಿಲ್ (ಅರಂತೋಡು), ಆಯಿಷಾ ಹಜ್ಜುಮ್ಮ ತೆಕ್ಕಿಲ್ (ಮುನಂಬ, ಚೆಂಗಳ), ಜಯ್ಬನ್ನಿಸ ಇಕ್ಬಾಲ್ ತೆಕ್ಕಿಲ್ (ಬೆಂಗಳೂರು) ಸೇರಿದಂತೆ ಅಪಾರ ಬಂಧು-ಬಳಗ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಕುಟುಂಬಸ್ಥರು ಹಾಗೂ ಬಂಧು-ಬಳಗ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
m