ರಕ್ಷಣಾ ಕಾರ್ಯದಲ್ಲಿ ತೊಡಗಿದ ಸ್ಥಳೀಯರು; ಆಂಬುಲೆನ್ಸ್ ವಾಟ್ಸಪ್ ಗ್ರೂಪ್ ಮೂಲಕ ತುರ್ತು ಅಲರ್ಟ್
ಕೊಯನಾಡು: ದೇವರಕೊಲ್ಲಿ ಸಮೀಪದ ಅಬ್ಬಿಕೊಲ್ಲಿ ಜಲಪಾತದ ಬಳಿ ಟೆಂಪೊ ಟ್ರಾವಲರ್ ಮೇಲೆ ಲಾರಿಯೊಂದು ಮಗುಚಿ ಬಿದ್ದ ಪರಿಣಾಮ ಭೀಕರ ಅಪಘಾತ ಸಂಭವಿಸಿದ ಘಟನೆ ಬುಧವಾರ ವರದಿಯಾಗಿದೆ.ಮೂವರು ಗಾಯಳುಗಳನ್ನು ಸುಳ್ಯ ಆಸ್ಪತ್ರೆಗೆ ಕರೆತರಲಾಗುತ್ತಿದೆ ಎಂಬ ಮಾಹಿತಿ ಲಭ್ಯ ವಾಗುತ್ತಿದೆ

ಘಟನಾ ಸ್ಥಳದಲ್ಲಿ ಮಳೆಯ ನಡುವೆಯೇ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್‌ಗಳಿಗೆ ಮಾಹಿತಿ ನೀಡಲಾಗಿದ್ದು, ಆಂಬುಲೆನ್ಸ್ ವಾಟ್ಸಪ್ ಗ್ರೂಪ್ ಮೂಲಕ ತುರ್ತು ಅಲರ್ಟ್ ನೀಡಲಾಗಿದೆ.
ಮಗುಚಿ ಬಿದ್ದ ಲಾರಿಯನ್ನು ತೆರವುಗೊಳಿಸಲು ಕ್ರೇನ್‌ನ್ನು ಕೂಡ ಘಟನಾ ಸ್ಥಳಕ್ಕೆ ಕಳುಹಿಸಲಾಗುತ್ತಿದೆ. ಅರಂತೋಡು ಮೂಲದ ಶರತ್ ಅವರ ಆಂಬುಲೆನ್ಸ್ ಹಾಗೂ ಸುಳ್ಯದ ಲೈಫ್ ಕೇರ್ ಆಂಬುಲೆನ್ಸ್ ಘಟನಾ ಸ್ಥಳದತ್ತ ತೆರಳಿವೆ ಎಂದು ತಿಳಿದುಬಂದಿದೆ.
ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಅಪಘಾತದ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.





m

