Featured

ಪುತ್ತೂರು: ದಾರಂದಕುಕ್ಕು ಸೈಫುಲ್ ಮದರಸದಲ್ಲಿ ವಿಜೃಂಭಣೆಯ ಮೀಲಾದ್ ಆಚರಣೆ

ಪುತ್ತೂರು: ದಾರಂದಕುಕ್ಕು ಸೈಫುಲ್ ಮದರಸದಲ್ಲಿ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ಅವರ ಜನ್ಮದಿನದ ಅಂಗವಾಗಿ ಮೀಲಾದ್ ಕಾರ್ಯಕ್ರಮವನ್ನು ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು. ಸಲಾತ್ ಕಮಿಟಿ ಅಧ್ಯಕ್ಷ ಡಿ.ಕೆ. ನಿಜಾಮ್ ಧ್ವಜಾರೋಹಣ ನೆರವೇರಿಸಿದರು. ಮದರಸ ಕಮಿಟಿ ಅಧ್ಯಕ್ಷ ಡಿ.ಕೆ. ಉಮ್ಮರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮದರಸ ಉಸ್ತಾದ್ ಯಾಕೂಬ್ ದಾರಿಮಿ ಸವಣೂರು ಅವರ ನೇತೃತ್ವದಲ್ಲಿ ಮೌಲೂದ್ ಪಾರಾಯಣ ನಡೆಯಿತು. ಬಳಿಕ ಮಾತನಾಡಿದ ಅವರು, “ಪ್ರವಾದಿಯವರ ಜನ್ಮದಿನವು ಲೋಕವೇ ಕೊಂಡಾಡುವ ಪವಿತ್ರ ದಿನವಾಗಿದ್ದು, ಈ ಸಂದರ್ಭದಲ್ಲಿ ಮಸೀದಿಗಳು ಹಾಗೂ ಮನೆಗಳಲ್ಲಿ ವಿಶೇಷ ಪ್ರಾರ್ಥನೆ, ಕುರಾನ್ ಪಠಣ ಮತ್ತು ಪ್ರವಾದಿಯವರ ಜೀವನ ಚರಿತ್ರೆಯ ಸ್ಮರಣೆ ನಡೆಯುತ್ತದೆ” ಎಂದು ಹೇಳಿದರು.
ಮೀಲಾದ್ ಕಾರ್ಯಕ್ರಮದಲ್ಲಿ ಮದರಸ ವಿದ್ಯಾರ್ಥಿಗಳು, ಊರಿನ ಗಣ್ಯರು, ಹಿರಿಯರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕಾಸಿಂ ಪಲ್ಸತಡ್ಕ, ಡಿ.ಕೆ. ಹಮೀದ್, ಎ.ಕೆ. ಬಶೀರ್ ಹಾಜಿ, ಹಮೀದ್ ಕುವೈಟ್, ಡಿ.ಕೆ. ಕಲಂದರ್, ಡಿ.ಕೆ. ಅಶ್ರಫ್ ಹಾಜಿ, ಡಿ.ಕೆ. ಇರ್ಷಾದ್, ಡಿ.ಕೆ. ಅಬ್ಬಾಸ್, ಎ.ಕೆ. ರಫೀಕ್, ಅಶ್ರಫ್ ಕಾಸಿಂ, ಬಶೀರ್ ಮುಸ್ಲಿಯಾರ್ ಹಾಗೂ ಇಸ್ಮಾಯಿಲ್ ಸೇಡಿಯಾಫ್ ಸೇರಿದಂತೆ ಹಲವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಸಿಹಿತಿಂಡಿ ವಿತರಿಸಿ ಶುಭ ಹಾರೈಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕಮಿಟಿ ಕಾರ್ಯದರ್ಶಿ ಡಿ.ಕೆ. ಹಕೀಮ್ ಆತ್ಮೀಯ ಸ್ವಾಗತಿಸಿ ಧನ್ಯವಾದ  ಸಲ್ಲಿಸಿದರು.
m