2026 -27 ರ ತಾಲ್ಲೂಕು ಮೀಲಾದ್ ಸಮಿತಿ ಸುಳ್ಯ ಪುನರ್‌ರಚನೆ: ಅಧ್ಯಕ್ಷರಾಗಿ ಮುನಾಫರ್ ನಾವೂರ್ ಆಯ್ಕೆ
ಸೆಪ್ಟೆಂಬರ್ 11 ರಂದು ಸುಳ್ಯ ತಾಲ್ಲೂಕು ಬೃಹತ್ ಮೀಲಾದ್ ರ್ಯಾಲಿ ಹಾಗೂ ಸಭಾ ಕಾರ್ಯಕ್ರಮ

ಸುಳ್ಯ: 2026ರ ಮೀಲಾದ್ ಉನ್ನಬಿ (ಸಲ್ಲಲ್ಲಾಹು ಅಲೈಹಿ ವಸಲ್ಲಮ್) ಆಚರಣೆಯ ಅಂಗವಾಗಿ ಮೀಲಾದ್ ಸಮಿತಿಯನ್ನು ಪುನರ್‌ರಚಿಸಲಾಗಿದ್ದು, ನೂತನ ಅಧ್ಯಕ್ಷರಾಗಿ ಮುನಾಫರ್ ನಾವೂರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಮೀಲಾದ್ ಆಚರಣೆಯ ಪೂರ್ವಭಾವಿಯಾಗಿ ನಡೆದ ಸಭೆಯಲ್ಲಿ ಕಾರ್ಯಕ್ರಮದ ಯಶಸ್ವಿ ಹಾಗೂ ಶಿಸ್ತುಬದ್ಧ ನಿರ್ವಹಣೆಗೆ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಸಂಚಾಲಕರಾಗಿ ಉಮ್ಮರ್ ಕೆ.ಎಸ್. ಮತ್ತು ರಶೀದ್ ಜಟ್ಟಿಪಳ್ಳ, ಉಪಾಧ್ಯಕ್ಷರಾಗಿ ಉನೈಸ್ ಪೆರಾಜೆ, ನವಾಝ್ ಪಂಡಿತ್ ಹಾಗೂ ಸುಹೈಲ್ ವೆಜ್, ಪ್ರಧಾನ ಕಾರ್ಯದರ್ಶಿಯಾಗಿ ಇಕ್ಬಾಲ್ ಸುಣ್ಣಮೂಲೆ, ಜೊತೆ ಕಾರ್ಯದರ್ಶಿಗಳಾಗಿ ಅಶ್ರಫ್ ಆಚ್ಚಾರು ಮತ್ತು ಅಶ್ರಫ್ ವೆಜ್, ಕೋಶಾಧಿಕಾರಿಯಾಗಿ ಖಲಂದರ್ ಎಲಿಮಲೆ ಹಾಗೂ ಸಂಘಟನಾ ಕಾರ್ಯದರ್ಶಿಗಳಾಗಿ ಶರೀಫ್ ಕಂಠಿ ಮತ್ತು ಅಝಿಝ್ ಸಂಗಮ್ ಅವರನ್ನು ಆಯ್ಕೆ ಮಾಡಲಾಯಿತು.

ಸಮಿತಿ ಸದಸ್ಯರಾಗಿ ಜುನೈದ್, ಹನೀಫ್ ಕಲ್ಲಪಳ್ಳಿ, ಥಾಬಿ ಹೈವೇ, ನಜೀರ್ ಶಾಂತಿನಗರ, ಸಿದ್ದೀಕ್ ಫ್ರೂಟ್, ರಶೀದ್ ಅಡ್ವಕೇಟ್, ಮುಸ್ತಫಾ ಪಂಡಿತ್, ಲತೀಫ್ ಕಿಸ್ಮಿ, ಅಂಚು ನಾವೂರ್, ಫಾಝಿಲ್, ಫಾಇಝ್ ಪಂಡಿತ್, ನಿಯಾನ್ ಜನತಾ, ರಹೀಮ್, ಮುಸ್ತಫಾ ವೆಜ್, ತಬ್ಶೀರ್ ಕುಂಬ್ಳೆಕಾರ್ಸ್, ನಾಸಿರ್ ಬಾರಿಕಾಡ್, ಫಾಝಿಲ್ ಬೊರುಗುಡ್ಡೆ, ರಿನಾಝ್ (ರಿನ್ನು) ಬೊರುಗುಡ್ಡೆ, ಜುನೈದ್ ಇಬ್ರಾಹಿಂ, ಖಾದರ್ ಸಂಗಮ್, ಮೀರಾಜ್ ಸುಳ್ಯ, ಸಿದ್ದೀಕ್ ಸಿ.ಎ., ಸಿದ್ದೀಕ್ ಕೊಕೊ, ಸಿದ್ದೀಕ್ ಕೊಡಿಯೆಮ್ಮೆ, ಶಿಯಾಬ್ ಶಾ ಜಟ್ಟಿಪಳ್ಳ, ಫೈಝಲ್ ಜಟ್ಟಿಪಳ್ಳ, ಮನ್ಸೂರ್ ಮೆಟ್ರೊ, ಉಸ್ಮಾನ್ ಕೊಯನಾಡು,ರುನೈಸ್ ಕೊಯನಾಡು, ಹಾಗೂ ಶಿಯಾಬ್ ಸಿ ಎ , ರಝಾಕ್ ಕೊಡಿಯಾಲಬೈಲು,ಇವರನ್ನು ನೇಮಕ ಮಾಡಲಾಗಿದೆ. ನೂತನ ಸಮಿತಿಯ ನೇತೃತ್ವದಲ್ಲಿ ಮುಂಬರುವ ಸೆಪ್ಟೆಂಬರ್ 11ರಂದು ಮೀಲಾದ್ ಆಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ, ಶಿಸ್ತುಬದ್ಧವಾಗಿ ಹಾಗೂ ಅರ್ಥಪೂರ್ಣವಾಗಿ ಆಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಕಾರ್ಯಕ್ರಮದ ವಿವಿಧ ಚಟುವಟಿಕೆಗಳನ್ನು ಸಮನ್ವಯದಿಂದ ನಡೆಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.






m


Scroll To Top