Featured, ಇತರೆ, ಸ್ಥಳೀಯ

ಯೂತ್ ಫ್ರೆಂಡ್ಸ್ ಕೊಯನಾಡು ವತಿಯಿಂದ ಬೃಹತ್ ಸಾರ್ವಜನಿಕ ಸೇವಾ ಶಿಬಿರಗಳ ಪ್ರೌಢ ಸಮಾಪ್ತಿ

ಕೊಯನಾಡು: ಪ್ರವಾದಿ ಮುಹಮ್ಮದ್ ಮುಸ್ತಫಾ ( ಸ ಅ) ಅವರ 1501ನೇ ಜನ್ಮ ದಿನಾಚರಣೆಯ ಪ್ರಯುಕ್ತ ಯೂತ್ ಫ್ರೆಂಡ್ಸ್ ಕೊಯನಾಡು ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರ, ಉಚಿತ ಕಣ್ಣಿನ ತಪಾಸಣಾ ಶಿಬಿರ ಹಾಗೂ ಹಿಜಾಮಾ ಕ್ಯಾಂಪ್ ಯಶಸ್ವಿಯಾಗಿ ಹಾಗೂ ಅರ್ಥಪೂರ್ಣವಾಗಿ ಸಂಪನ್ನಗೊಂಡಿತು

♦

ಸಾರ್ವಜನಿಕ ಸೇವೆಯ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಶಿಬಿರಗಳಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯಿತು. ರಕ್ತದಾನ ಶಿಬಿರದಲ್ಲಿ 30 ಮಂದಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ ಮಾನವೀಯ ಸೇವೆಗೆ ಕೈಜೋಡಿಸಿದರು. ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ 55 ಮಂದಿ ಭಾಗವಹಿಸಿ ತಪಾಸಣೆಯ ಸದುಪಯೋಗ ಪಡೆದುಕೊಂಡರು. ಇದೇ ವೇಳೆ ಆಯೋಜಿಸಲಾಗಿದ್ದ ಹಿಜಾಮಾ ಕ್ಯಾಂಪ್‌ನಲ್ಲಿ 28 ಮಂದಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಊರಿನ ಸಾರ್ವಜನಿಕರು, ಸರ್ವ ಜಮಾಅತ್ ಸದಸ್ಯರು, ಹಿರಿಯರು, ಪೋಷಕರು, ಮಕ್ಕಳು ಹಾಗೂ ಯುವಕರು ಸೇರಿದಂತೆ ಹಲವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಶಿಬಿರಕ್ಕೆ ಸಂಪೂರ್ಣ ಸಹಕಾರ ನೀಡಿದರು.
ಯುವ ಸಮುದಾಯದ ಸಾಮಾಜಿಕ ಬದ್ಧತೆ ಹಾಗೂ ಸಾರ್ವಜನಿಕ ಸೇವೆಯ ಮನೋಭಾವವನ್ನು ಪ್ರತಿಬಿಂಬಿಸಿದ ಈ ಕಾರ್ಯಕ್ರಮವು, ಆರೋಗ್ಯ ಮತ್ತು ಮಾನವೀಯ ಸೇವೆಯ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ಸಾರಿತು.
“ರಕ್ತದಾನ – ಜೀವದಾನ, ಆರೋಗ್ಯ ಸೇವೆ – ಮಾನವೀಯ ಸೇವೆ” ಎಂಬ ಆಶಯದೊಂದಿಗೆ ನಡೆದ ಈ ಶಿಬಿರವು ಕೊಯನಾಡಿನ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಮತ್ತೊಂದು ಸಾರ್ಥಕ ಹೆಜ್ಜೆಯಾಗಿ ಮೂಡಿಬಂದಿತು.
m