ಅರಂಬೂರು ಅಲ್ ಅಮೀನ್ ಯೂತ್ ಫೆಡರೇಶನ್ ನೂತನ ಪದಾಧಿಕಾರಿಗಳ ಆಯ್ಕೆ
ಗೌರವಾದ್ಯಕ್ಷರಾಗಿ ಕಬೀರ್ ಲಿಮ್ರಾ ಪುನರಾಯ್ಕೆ , ಅಧ್ಯಕ್ಷರಾಗಿ ಅಬ್ದುಲ್ಲಾ ಅರಂಬೂರು, ಆಸಿಫ್ ಪನ್ನೆ, ಕಾರ್ಯದರ್ಶಿ

ಅರಂಬೂರು: ಸ್ಥಳೀಯ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅಲ್ ಅಮೀನ್ ಯೂತ್ ಫೆಡರೇಶನ್ ಅರಂಬೂರು ಇದರ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 5 ರಂದು ಅರಂಬೂರು ಮದ್ರಸಾ ಸಭಾಂಗಣದಲ್ಲಿ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮವು ಬದ್ರ್ ಜುಮಾ ಮಸೀದಿಯ ಖತೀಬರಾದ ಬಹು| ಮುಹೀನುದ್ದೀನ್ ಫೈಝಿ ಅವರ ದುಆ ಆಶೀರ್ವಚನದೊಂದಿಗೆ ಆರಂಭಗೊಂಡಿತು. ತದನಂತರ ಸಂಸ್ಥೆಯ ಅಧ್ಯಕ್ಷರಾದ ಆಸಿಫ್ ಪನ್ನೆ ಅವರು ಅಧ್ಯಕ್ಷೀಯ ಭಾಷಣ ಮಾಡಿ, ಕಳೆದ ಅವಧಿಯಲ್ಲಿ ಸಂಘಟನೆಯು ನಡೆಸಿದ ಸಮಾಜಮುಖಿ ಕಾರ್ಯಗಳನ್ನು ಸ್ಮರಿಸಿ ಸರ್ವರ ಸಹಕಾರಕ್ಕೆ ಧನ್ಯವಾದ ಸಲ್ಲಿಸಿದರು.ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ನಿಝಾರ್ ಪಾಲಡ್ಕ ಅವರು ವಾರ್ಷಿಕ ವರದಿ ವಾಚನ ನಡೆಸಿದರೆ, ಜಂಟಿ ಕೋಶಾಧಿಕಾರಿ ಅಶ್ಫಾಕ್ ಪಿ.ಆರ್ ಅವರು ಲೆಕ್ಕಪತ್ರ ಮಂಡಿಸಿದರು.

ಸಭೆಯಲ್ಲಿ, ಹಲವಾರು ವರ್ಷಗಳಿಂದ ನಮ್ಮ ಸಂಸ್ಥೆಯ ಕೋಶಾಧಿಕಾರಿಯಾಗಿ ಅತ್ಯಂತ ಪ್ರಾಮಾಣಿಕವಾಗಿ ಮತ್ತು ಶಿಸ್ತುಬದ್ಧವಾಗಿ ಸೇವೆ ಸಲ್ಲಿಸಿದ ನಾಸಿರ್ ಪಾಲಡ್ಕ ರವರ ಸೇವೆಯನ್ನು ಗುರುತಿಸಿ ಅವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅವರಿಗೆ ಹಣ್ಣಿನ ಹಂಪಲು ನೀಡಿ, ಶಾಲು ಹೊದಿಸಿ ಸನ್ಮಾನಿಸಲಾಯಿತು. ಇದಲ್ಲದೆ, ಈ ಅವಧಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಇತರ ಸದಸ್ಯರನ್ನೂ ಅಭಿನಂದನಾ ಪೋಸ್ಟರ್ ಅನ್ನು ಪ್ರತ್ಯೇಕ ಪರದೆಯಲ್ಲಿ (ಸ್ಕ್ರೀನ್) ಪ್ರದರ್ಶಿಸುವ ಮೂಲಕ ಅವರ ಸಾಧನೆಯನ್ನು ಎತ್ತಿ ತೋರಿಸಲಾಯಿತು ಮತ್ತು ಅಭಿನಂದಿಸಲಾಯಿತು.ಸಂಸ್ಥೆಯ ಮುಂದಿನ ಯೋಜನಾ ರೂಪರೇಷೆಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಿದ ಬಳಿಕ, ಹಳೆಯ ಸಮಿತಿಯನ್ನು ವಿಸರ್ಜಿಸಿ ನೂತನ ಸಾಲಿನ ಕಾರ್ಯಾಕಾರಿ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳ ವಿವರ
ಗೌರವಾದ್ಯಕ್ಷರಾಗಿ ಕಬೀರ್ ಲಿಮ್ರಾ ಪುನರಾಯ್ಕೆಯಾದರು, ಅಧ್ಯಕ್ಷರು: ಅಬ್ದುಲ್ಲಾ ಅರಂಬೂರು, ಉಪಾಧ್ಯಕ್ಷರು: ಸಫ್ವಾನ್ ಮಾಂಬ್ಲಿ ಹಾಗೂ ಮಿರಾಜ್ ಮಾಂಬ್ಲಿ, ಪ್ರಧಾನ ಕಾರ್ಯದರ್ಶಿ: ಆಸಿಫ್ ಪನ್ನೆ, ಕೋಶಾಧಿಕಾರಿ: ನಾಸಿರ್ ಪಾಲಡ್ಕ, ಜಂಟಿ ಕಾರ್ಯದರ್ಶಿಗಳು: ನಿಝಾರ್ ಪಾಲಡ್ಕ, ಆಶಿಕ್ ಸ್ಟಾರ್, ಜಂಟಿ ಕೋಶಾಧಿಕಾರಿಗಳು: ಅಶ್ಫಾಕ್ ಪಿ.ಆರ್, ಮಹಮ್ಮದ್ ಮಾಂಬ್ಲಿ, ಸನ್ಮಾನ ಸಮಿತಿ ಶಂಸುದ್ದೀನ್ ಮಾಂಬ್ಲಿ, ಮಾಧ್ಯಮ ವಿಭಾಗ (Media): ಅದ್ನಾನ್, ಫಜಾನ್, ಶೈಕ್ಷಣಿಕ ವಿಭಾಗ (Academic): ರವೂಫ್ ಮಾಂಬ್ಲಿ, ಆರೋಗ್ಯ ವಿಭಾಗ (Medical Wing): ರಮೀಝ್ ಶೈನ್, ಆಸ್ತಿ ನಿರ್ವಹಣಾ ವಿಭಾಗ (Asset Management): ಜಾವೇದ್ ಶೇಖ್ ಆಯ್ಕೆಯಾದರು, ಕಾರ್ಯಕ್ರಮದ ಕೊನೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು







m


Scroll To Top