ಇತರೆ

ಸುಳ್ಯ : ಶೃಂಗಾರ್ ಬ್ಯೂಟಿ ಸೆಂಟರ್ ಮಾಲಕ ಚಿದಾನಂದ ಮೊಂಟಡ್ಕ ನಿಧನ

ಸುಳ್ಯ : ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಸುಳ್ಯದ ಬಾಳೆಮಕ್ಕಿಯ ಶೃಂಗಾರ್ ಬ್ಯೂಟಿ ಸೆಂಟರ್ ಮಾಲಕ ಚಿದಾನಂದ ಮೊಂಟಡ್ಕ (64) ಅವರು ಸೆ. 25ರಂದು ಬೆಳಗ್ಗೆ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ಶ್ರೀಮತಿ ಭಾರತಿ ಚಿದಾನಂದ, ಪುತ್ರಿಯರಾದ ಶ್ರೀಮತಿ ಅಂಕಿತ ಹಾಗೂ ಮಯೂರಿ, ಪುತ್ರ ಶ್ರೀರಾಮ ಸೇರಿದಂತೆ ಕುಟುಂಬಸ್ಥರು, ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತಿಮ ದರ್ಶನಕ್ಕೆ ಬೆಳಿಗ್ಗೆ 10 ಗಂಟೆಯವರೆಗೆ ಕುರುಂಜಿಭಾಗ್‌ನಲ್ಲಿರುವ ಅವರ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಬಳಿಕ ಕುಕ್ಕುಂದೂರು ಮೊಂಟಡ್ಕದಲ್ಲಿರುವ ಅವರ ಮನೆಯಲ್ಲಿ ಅಂತಿಮ ವಿಧಿವಿಧಾನಗಳು ನಡೆಯಲಿವೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಹೊಲಿಗೆ ಯಂತ್ರಗಳು ಹಾಗೂ ಅವುಗಳ ಬಿಡಿಭಾಗಗಳ ಸುಳ್ಯದ ಪ್ರಮುಖ ಡೀಲರ್‌ ಆಗಿಯೂ ಗುರುತಿಸಿಕೊಂಡಿದ್ದ ಚಿದಾನಂದ ಮೊಂಟಡ್ಕ ಅವರು ಸರಳತೆ ಹಾಗೂ ಆತ್ಮೀಯತೆಯಿಂದ ಎಲ್ಲರೊಂದಿಗೆ ಬೆರೆಯುತ್ತಿದ್ದರು. ಅವರ ನಿಧನವು ಕುಟುಂಬಸ್ಥರು, ಬಂಧು-ಮಿತ್ರರು ಹಾಗೂ ಪರಿಚಯಸ್ಥರಲ್ಲಿ ತೀವ್ರ ದುಃಖವನ್ನುಂಟುಮಾಡಿದೆ.