Featured, ಇತರೆ

ಉಡುಪಿ: ಮೂರು ವರ್ಷದ ಪುತ್ರನೊಂದಿಗೆ 29 ವರ್ಷದ ಮಹಿಳೆ ನಾಪತ್ತೆ; ಪತ್ತೆಗೆ ಪೊಲೀಸರ ಶೋಧ

ಉಡುಪಿ: ನಗರದ ಹಳೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪ ಅ.23ರಂದು ನಾಸಿಕ್ ಮೂಲದ ಕಾವ್ಯಾ (29) ಎಂಬವರು ತಮ್ಮ ಪುತ್ರ ಶಿವಾಂಶ (3)ನೊಂದಿಗೆ ನಾಪತ್ತೆಯಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸ್ ಪ್ರಕಟಣೆಯ ಪ್ರಕಾರ, ಕಾವ್ಯಾ ಮತ್ತು ಅವರ ಪುತ್ರನನ್ನು ಮೆಣಸೆಯಲ್ಲಿರುವ ಪತಿ ಯತೀಶ್ವರ ಅವರ ಮನೆಗೆ ಬಿಡಲು ಸಂಬಂಧಿಕರು ನಾಸಿಕ್‌ನಿಂದ ಕರೆತಂದಿದ್ದರು. ಅ.23ರಂದು ಬೆಳಗ್ಗೆ 8.30ಕ್ಕೆ ಉಡುಪಿಗೆ ತಲುಪಿ ಹಳೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ನಿಂತಿದ್ದರು. ಈ ವೇಳೆ ಸಂಬಂಧಿಕರು ತಿಂಡಿ ಸೇವಿಸಲು ತೆರಳಿದ್ದು, ಬೆಳಗ್ಗೆ 9.15ಕ್ಕೆ ವಾಪಸ್ ಬಂದಾಗ ತಾಯಿ ಮತ್ತು ಮಗ ನಾಪತ್ತೆಯಾಗಿದ್ದರು.

ಕಾವ್ಯಾ ಅವರು 4 ಅಡಿ 10 ಇಂಚು ಎತ್ತರ, ಎಣ್ಣೆಗಪ್ಪು ಮೈಬಣ್ಣ ಹಾಗೂ ಕಪ್ಪು ಕೂದಲು ಹೊಂದಿದ್ದು, ನಾಪತ್ತೆಯಾದ ವೇಳೆ ಹಳದಿ ಬಣ್ಣದ ಹೂವಿನ ವಿನ್ಯಾಸದ ಟಾಪ್ ಮತ್ತು ನೀಲಿ ಜೀನ್ಸ್ ಧರಿಸಿದ್ದರು. ಕನ್ನಡ, ಹಿಂದಿ, ತುಳು ಹಾಗೂ ಮರಾಠಿ ಭಾಷೆ ಮಾತನಾಡುತ್ತಾರೆ.

ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆ 0820-2520444, ಕಂಟ್ರೋಲ್ ರೂಂ 0820-2526444, ಪೊಲೀಸ್ ನಿರೀಕ್ಷಕರು 9480805408 ಅಥವಾ ಪೊಲೀಸ್ ಉಪನಿರೀಕ್ಷಕರು 9080805445 ಅವರನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Related Posts