Featured, ಸ್ಥಳೀಯ

ಅನ್ಸಾರ್ ವತಿಯಿಂದ ಸ್ವಚ್ಛತಾ ಆಂದೋಲನ ಸರಣಿ ಕಾರ್ಯಕ್ರಮಕ್ಕೆ ಚಾಲನೆ

ನೈರ್ಮಲೀಕರಣ ವಿಶ್ವಾಸದ ಒಂದು ಭಾಗ :ಖಾಮಿಲ್ ಸಖಾಫಿ ಉಸ್ತಾದ್ 

ಸುಳ್ಯ : 6 ದಶಕಗಳ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಡೈಮಂಡ್ ಜುಬಿಲಿಯ ಹೊಸ್ತಿಲಲ್ಲಿರುವ ದ.ಕ ಜಿಲ್ಲಾ ರಾಜ್ಯೊತ್ಸವ ಪುರಸಕೃತ ಸುಳ್ಯದ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ವತಿಯಿಂದ ಸ್ವಚ್ಛತಾ ಆಂದೋಲನ ಮಾಸಾಚಾರಣೆ ಯ ಅಂಗವಾಗಿ ವಿವಿಧ ಶ್ರದ್ದಾ ಕೇಂದ್ರ ಗಳಲ್ಲಿ ಸ್ವಚ್ಛತೆ ವಿದ್ಯಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉಪನ್ಯಾಸ, ಮನೆ ಮನೆ ಗಳಿಗೆ ಕರಪತ್ರ ಹಂಚಿಕೆ, ಗಲೀಜು ಮಾಡುವ ಕಾರ್ನರ್ ಗಳಲ್ಲಿ ಭಿತ್ತಿಪತ್ರ ಅಳವಡಿಕೆ, ಆಯ್ದು ಸ್ಥಳಗಳಲ್ಲಿ ಬಾಟಲ್ ಬೂತ್ ಸ್ಥಾಪನೆ ಮೊದಲಾದ ಕಾರ್ಯಕ್ರಮ ಗಳನ್ನು ತಿಂಗಳು ಪೂರ್ತಿ ಆಚರಿಸಲು ತೀರ್ಮಾನಿಸಿದ್ದು, ಈ ಸರಣಿ ಕಾರ್ಯಕ್ರಮದ ಅಂಗವಾಗಿ ಪ್ರಥಮ ಉಪನ್ಯಾಸ ಮತ್ತು ಪೋಸ್ಟರ್ ಬಿಡುಗಡೆ ಇಂದು ಗಾಂಧಿನಗರ ಮದರಸ ವಠಾರದಲ್ಲಿ ಚಾಲನೆ ನೀಡಲಾಯಿತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆ ಯ ಅಧ್ಯಕ್ಷ ಕೆ. ಬಿ. ಇಬ್ರಾಹಿಂ ವಹಿಸಿದ್ದರು, ಗಾಂಧಿನಗರ ಜುಮ್ಮಾ ಮಸ್ಜಿದ್ ಖತೀಬರಾದ ಅಲ್ ಹಾಜ್ ಅಶ್ರಫ್ ಖಾಮಿಲ್ ಸಖಾಫಿ ಉಸ್ತಾದ್ ವಿಶೇಷ ಉಪನ್ಯಾಸ ನೀಡಿ ಸ್ವಚ್ಛತೆಗೆ ಇಸ್ಲಾಂ ಧರ್ಮ ದಲ್ಲಿ ಮಹತ್ವ ದ ಸ್ಥಾನವಿದೆ, ಶುದ್ದಿ ಇಲ್ಲದೆ ಮಾಡುವ ಎಲ್ಲಾ ಸತ್ಕರ್ಮ ಗಳು ನಿಷ್ಪ್ರಯೋಜಕ ಎಂದರು

ಗಾಂಧಿನಗರ ಮುದರ್ರಿಸ್ ಮುಬಶಿರ್ ಅಹ್ಸನಿ ಉಸ್ತಾದ್ ಶುಭಾಶoಸನೆ ಮಾಡಿದರು

ಜೆ ಎಂ ಅಧ್ಯಕ್ಷ ಹಾಜಿ ಕೆ ಎಂ ಎಸ್ ಮಹಮ್ಮದ್ ಭಿತ್ತಿ ಪತ್ರ ಬಿಡುಗಡೆ ಗೊಳಿಸಿದರು ವೇದಿಕೆ ಯಲ್ಲಿ ಉಪಾಧ್ಯಕ್ಷ ಹಮೀದ್ ಬೀಜಕೊಚ್ಚಿ, ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫ, ಆಂದೋಲನದ ಸಂಚಾಲಕ ಯಾಕೂಬ್ ಹಾಜಿ ಎಸ್ ಟಿ, ವರ್ತಕರ ಸಂಘದ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಜನತಾ ನಿಕಟಪೂರ್ವ ಅದ್ಯಕ್ಷ ಹಾಜಿ ಎಸ್.ಅಬ್ದುಲ್ಲ ಕಟ್ಟೆಕ್ಕಾರ್

ಉಪಸ್ಥಿತರಿದ್ದರು, ಮದ್ರಸ ಮುಖ್ಯ ಶಿಕ್ಷಕ ಸಿರಾಜುದ್ದೀನ್ ಸಖಾಫಿ ಸ್ವಾಗತಿಸಿ, ನಿರ್ದೇಶಕ ಶಾಫಿ ಕುತ್ತಾಮೊಟ್ಟೆ ವಂದಿಸಿದರು

ಕಾರ್ಯಕ್ರಮ ದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ, ಹನೀಫ್ ಜನತಾ, ಹನೀಫ್ ಬುಶ್ರಾ, ನಿರ್ದೇಶಕರು ಗಳಾದ ಅಬ್ದುಲ್ ಗಫ್ಫಾರ್, ಮಜೀದ್ ಕೆ. ಪಿ, ಸಿರಾಜ್ ಫ್ಯಾನ್ಸಿ, ಮುಹಿಯ್ಯದ್ದೀನ್ ಫ್ಯಾನ್ಸಿ, ಮದರಸ ಉಸ್ತಾದ್ ಕುಂಜಿಲ ಮದನಿ, ಮೆನೇಜರ್ ಮುನೀರ್ ಅನ್ಸಾರ್ ಮೊದಲಾದವರು ಭಾಗವಹಿಸಿದ್ದರು