ಎಸ್ಎಸ್ಎಫ್ ಸುಳ್ಯ ಸೆಕ್ಟರ್ ಮತ್ತು ಎಸ್ವೈಎಸ್ ಸುಳ್ಯ ಸರ್ಕಲ್ ಸಂಯುಕ್ತ ಆಶ್ರಯದಲ್ಲಿ ಆಯೋಜನೆ
ಸುಳ್ಯ: ಶೈಖ್ ರಿಫಾಯೀ ಮಾಸಾಚರಣೆ ಹಾಗೂ ಸಮಸ್ತ ಸೆಂಟಿನರಿ (ಶತಮಾನೋತ್ಸವ) ಸಮ್ಮೇಳನದ ಅಂಗವಾಗಿ ಎಸ್ಎಸ್ಎಫ್ ಸುಳ್ಯ ಸೆಕ್ಟರ್ ಮತ್ತು ಎಸ್ವೈಎಸ್ ಸುಳ್ಯ ಸರ್ಕಲ್ನ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 26ರ ಸೋಮವಾರ ಸುಳ್ಯದ ಮೊಗರ್ಪಣೆಯ ಎನ್.ಐ.ಎಂ. (NIM Mogarpane) ಯಲ್ಲಿ ಬೃಹತ್ ಹಿಜಾಮು ಶಿಬಿರ ನಡೆಯಲಿದೆ.

ಸಮಸ್ತದ ನೂರು ವರ್ಷಗಳ ಸಂಭ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಸರಣಿ ಕಾರ್ಯಕ್ರಮಗಳ ಭಾಗವಾಗಿ ಈ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ. ಸಾರ್ವಜನಿಕರಿಗೆ ಆರೋಗ್ಯ ಸೇವೆಯನ್ನು ಒದಗಿಸುವ ಉದ್ದೇಶದಿಂದ ನಡೆಯಲಿರುವ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಂಘಟಕರು ಮನವಿ ಮಾಡಿದ್ದಾರೆ.
ಶಿಬಿರದ ಕುರಿತು ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ 94803 07435, 87622 65593, 96114 78011 ಮತ್ತು 97409 92081 ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.