ಸ್ವಚ್ಛ ಪರಿಸರ, ಸುಂದರ ಸಮಾಜದ ನಿರ್ಮಾಣಕ್ಕೆ ಸಂಕಲ್ಪ: ಸುಳ್ಯದಲ್ಲಿ ಒಂದು ತಿಂಗಳ ಬೃಹತ್ ಸ್ವಚ್ಛತಾ ಆಂದೋಲನಕ್ಕೆ ಚಾಲನೆ
ಸುಳ್ಯ, ನ.1: ಸ್ವಚ್ಛತೆ ಕೇವಲ ಒಂದು ದಿನದ ಕಾರ್ಯಕ್ರಮವಾಗದೆ ಪ್ರತಿಯೊಬ್ಬ ನಾಗರಿಕನ ಜೀವನಶೈಲಿಯ ಭಾಗವಾಗಬೇಕು ಎಂಬ ಮಹತ್ವದ ಸಾಮಾಜಿಕ ಸಂದೇಶದೊಂದಿಗೆ, ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ (ರಿ.), ಗಾಂಧಿನಗರ, ಸುಳ್ಯ ಇದರ ಆಶ್ರಯದಲ್ಲಿ ವಿವಿಧ ಸಂಘ–ಸಂಸ್ಥೆಗಳ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿರುವ ಒಂದು ತಿಂಗಳ ಬೃಹತ್ ಸ್ವಚ್ಛತಾ ಆಂದೋಲನಕ್ಕೆ ಕನ್ನಡ ರಾಜ್ಯೋತ್ಸವದ ದಿನವಾದ ನವೆಂಬರ್ 1ರಂದು ಅರ್ಥಪೂರ್ಣ ಚಾಲನೆ ನೀಡಲಾಯಿತು.
ಸ್ವಚ್ಛ ಪರಿಸರವೇ ಆರೋಗ್ಯವಂತ ಸಮಾಜದ ಅಡಿಪಾಯ. ಪರಿಸರದ ಸ್ವಚ್ಛತೆಯಲ್ಲಿ ಪ್ರತಿಯೊಬ್ಬ ನಾಗರಿಕನ ಪಾಲ್ಗೊಳ್ಳುವಿಕೆಯೇ ನಿಜವಾದ ಸಾಮಾಜಿಕ ಜವಾಬ್ದಾರಿ ಎಂಬ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ಅಭಿಯಾನವನ್ನು ಆಯೋಜಿಸಲಾಗಿದೆ. ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ಅಧ್ಯಕ್ಷ ಕೆ.ಬಿ. ಇಬ್ರಾಹಿಂ ಅವರ ನೇತೃತ್ವದಲ್ಲಿ ಭಾನುವಾರ ಬೆಳಗ್ಗೆ ಸುಳ್ಯದ ಗಾಂಧಿನಗರ ಪೆಟ್ರೋಲ್ ಬಂಕ್ ಬಳಿಯ ಪರಿಸರವನ್ನು ಸ್ವಚ್ಛಗೊಳಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಸ್ವಚ್ಛತೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ – ಸುಧಾಕರ ರೈ
ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಸುಳ್ಯ ರೆಡ್ಕ್ರಾಸ್ ಸಂಸ್ಥೆಯ ಅಧ್ಯಕ್ಷ ಸುಧಾಕರ ರೈ, ನಮ್ಮ ಪರಿಸರ, ನಮ್ಮ ಮನೆ ಹಾಗೂ ಸುತ್ತಮುತ್ತಲಿನ ವಠಾರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ದೇಶದ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ. ಸ್ವಚ್ಛತೆ ಎನ್ನುವುದು ಕೇವಲ ಸಂಘ–ಸಂಸ್ಥೆಗಳ ಅಥವಾ ಸ್ಥಳೀಯ ಆಡಳಿತ ಸಂಸ್ಥೆಗಳ ಜವಾಬ್ದಾರಿಯಲ್ಲ. ಪ್ರತಿಯೊಬ್ಬರೂ ತಮ್ಮ ಪರಿಸರದ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಿದಾಗ ಮಾತ್ರ ಸ್ವಚ್ಛ, ಸುಂದರ ಹಾಗೂ ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ (ಸೂಡಾ) ಅಧ್ಯಕ್ಷ ಕೆ.ಎಂ. ಮುಸ್ತಫಾ, ಹಾಜಿ ಮಹಮ್ಮದ್ ಕೆಎಂಎಸ್ ಅದ್ಯಕ್ಷರು ಗಾಂಧಿನಗರ ಜಮಾಅತ್, ಹಾಜಿ ಕೆ.ಯಂ ಅಬ್ದುಲ್ ಮಜೀದ್ ಜನತಾ ಅದ್ಯಕ್ಷರು ಅನ್ಸಾರಿಯ ಸುಳ್ಯ, ಜಟ್ಟಿಪಳ್ಳ ಮದರಸ ಸದರ್ ಲತೀಫ್ ಸಖಾಫಿ ಇವರು ಭಾಗವಹಿಸಿದ್ದರು.
ಗಾಂಧಿನಗರದಲ್ಲಿ ಸ್ವಚ್ಛತೆಯ ಶ್ರಮದಾನ
ಅಭಿಯಾನದ ಮೊದಲ ವಾರ ಗಾಂಧಿನಗರ ಪೆಟ್ರೋಲ್ ಬಂಕ್ ಬಳಿಯಿಂದ ಗಾಂಧಿನಗರ ಕೇಂದ್ರ ಜುಮಾ ಮಸೀದಿವರೆಗಿನ ಪರಿಸರದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ವಯಂಸೇವಕರು ಒಗ್ಗಟ್ಟಿನಿಂದ ಶ್ರಮದಾನ ನಡೆಸುವ ಮೂಲಕ ಸಾರ್ವಜನಿಕ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದರು. ಸಾಮಾಜಿಕ ಕಳಕಳಿ, ಸೇವಾ ಮನೋಭಾವ ಹಾಗೂ ಸಂಘಟಿತ ಪ್ರಯತ್ನಕ್ಕೆ ಸಾಕ್ಷಿಯಾದ ಈ ಕಾರ್ಯಕ್ರಮದಲ್ಲಿ 150ಕ್ಕೂ ಅಧಿಕ ಮಂದಿ ಭಾಗವಹಿಸಿ ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಸಂಘಟಿತ ಸೇವೆಗೆ ಗಣ್ಯರು, ಸ್ವಯಂಸೇವಕರ ಸಾಥ್
ಅನ್ಸಾರ್ ಅಧ್ಯಕ್ಷ ಅಧ್ಯಕ್ಷರಾದ ಕೆ. ಬಿ. ಇಬ್ರಾಹಿಂ ಸ್ವಚ್ಛತಾ ಆಂದೋಲನದ ಸಂಚಾಲಕರು ಹಾಜಿ ಯಾಕೂಬ್ ಎಸ್. ಟಿ. ಪದಾಧಿಕಾರಿಗಳಾದ ಹನೀಫ್ ಜನತಾ,
ಹಾಜಿ ಹನೀಫ್ ಬುಶ್ರಾ ಶಾಫಿ ಕುತ್ತಮೊಟ್ಟೆ ಹಾಜಿ ಶುಕೂರ್ ಕೆ. ಎಚ್. ಬಶೀರ್ ಸಪ್ನ ಶಂಸುದ್ದೀನ್ ಕೆ. ಬಿ. ನಿರ್ದೇಶಕರಾದ ಹಾಜಿ ಕೆ. ಎಂ. ಮುಸ್ತಫಾ ಜನತಾ ಹಾಜಿ ಆದಂ ಕಮ್ಮಾಡಿ ಹಾಜಿ ಎಸ್. ಅಬ್ದುಲ್ಲಾ ಕಟ್ಟೆಕ್ಕಾರ್ ಹಾಜಿ ಅಬ್ದುಲ್ ಹಮೀದ್ ಜನತಾ ಹಾಜಿ ಅಬ್ದುಲ್ ಗಫಾರ್ ನಾವೂರು ಜುನೈದ್ ಎನ್. ಎ. ಶರೀಫ್ ಜಟ್ಟಿಪ್ಪಳ್ಳ ಅಬೂಬಕ್ಕರ್ ಎಸ್. ಪಿ. ಅಬ್ದುಲ್ ಲತೀಫ್ ಎಂ. ಕೆ. ಮಜೀದ್ ಕೆ. ಪಿ. ಸಿರಾಜ್ ಫ್ಯಾನ್ಸಿ ನೌಶಾದ್ ಬಾರ್ಪಣೆ ಶಹೀದ್ ಪಾರೆ ಇವರೊಂದಿಗೆ ವಿವಿಧ ಸಂಘ ಸಂಸ್ಥೆಗಳ ಸದಸ್ಯರುಗಳಾದಉಮ್ಮರ್ ಕೆ.ಎಸ್., ಕಲಾಮ್ ಸುಳ್ಯ, ಅಬೂಬಕ್ಕರ್ ಜಟ್ಟಿಪಳ್ಳ, ಕಾದರ್ ಜಟ್ಟಿಪಳ್ಳ, ಉನೈಸ್ ಪೆರಾಜೆ, ಶರೀಫ್ ಕಂಠಿ, ಪಿ.ಎ. ಮಹಮ್ಮದ್, ಶಮೀರ್ ಜಟ್ಟಿಪಳ್ಳ, ಇಕ್ಬಾಲ್ ಎಲಿಮಲೆ, ಅಬ್ದುಲ್ ರಹಮಾನ್ ಮೊಗರ್ಪಣೆ, ಶಾಲಿ ಕಟ್ಟಿಕ್ಕಾರ್, ಹಮೀದ್ ಕುರುಂಜಿ, ಕಯ್ಯೂಮ್ ಕಟ್ಟಿಕ್ಕಾರ್, ರಿಝ್ವಾನ್ ಜನಾತ, ಫೈಝಲ್ ಕಟ್ಟಿಕ್ಕಾರ್, ಮಜೀದ್ ನಾವೂರು, ಕಬೀರ್ ಜಟ್ಟಿಪಳ್ಳ, ಶಿಯಾಬ್ ಜಟ್ಟಿಪಳ್ಳ, ಇಮ್ರಾನ್ ಅಮೈ, ಹಮೀದ್ ಹಾಜಿ ಜಾಲ್ಸೂರು, ಅಕ್ಬರ್ ಕರಾವಳಿ, ಆಶೀಕ್, ಮಶೂದ್ ಮಚ್ಚು, ರವೂಫ್, ನಿಸಾರ್ ಅರಂಬೂರು, ಸಿನಾನ್ ಪನ್ನೆ ಅರಂಬೂರು, ಮಹಮ್ಮದ್ ಪೈಂಟ್, ಮಹಮ್ಮದ್ ನಾವೂರು, ಹಮೀದ್ ಬಿಜಕೊಚ್ಚಿ, ರಿಫಾಯಿ ಜಟ್ಟಿಪಳ್ಳ, ಅಮೀರ್ ಜಟ್ಟಿಪಳ್ಳ, ರಶೀದ್ ಜಟ್ಟಿಪಳ್ಳ, ಹನೀಫ್ ಕೆ.ವಿ.ಜಿ., ಅಶ್ರಫ್ ಸಂಗಮ್, ಸೆಮೀರ್ ಮೊಬೈಲ್ ಹಾರ್ಟ್, ಶಾಝಿಲ್ ಕುಂಬ್ಳೆ, ಅತ್ತಾವುಲ್ಲಾ ಕೆ ಎಮ್ ರಿಯಾಝ್ ಕಟ್ಟಿಕ್ಕಾರ್, ಅಶ್ರಫ್ ಫರ್ನಿಚರ್, ಮುಜಿಬ್ ಕೆ ಬಿ, ಅಬೀದ್ ಕಲ್ಲುಮುಟ್ಲು, ಸಿದ್ದೀಕ್ ಕೊಡಿಯಮ್ಮೆ, ರಫೀಕ್ ನಾವೂರು, ಹಿಶಾಮ್ ಜಟ್ಟಿಪಳ್ಳ, ಶಾಮೀಲ್ ಜಟ್ಟಿಪಳ್ಳ ಸೇರಿದಂತೆ 100ಕ್ಕೂ ಅಧಿಕ ಮಂದಿ ಸದಸ್ಯರು ಸ್ವಚ್ಛತಾ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಸ್ವಚ್ಛತಾ ಕಾರ್ಯಕ್ಕೆ ಸುಳ್ಯ ನಗರ ಪಂಚಾಯತ್ನ ಅಧಿಕಾರಿಗಳು ಹಾಗೂ ಪೌರಕಾರ್ಮಿಕರು ಸಹಕಾರ ನೀಡಿದರು. ಗಾಂಧಿನಗರ ಮಸೀದಿ ಸಮಿತಿಯ ವತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಬೆಳಗಿನ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಕೆ.ಎಂ. ಮುಸ್ತಫಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅನ್ಸಾರ್ ಸಂಸ್ಥೆಯ ವ್ಯವಸ್ಥಾಪಕ ಮುನೀರ್ ವಂದಿಸಿದರು.
ಒಂದು ತಿಂಗಳ ನಾಲ್ಕು ವಾರಗಳಲ್ಲಿ ನಡೆಯುವ ಸ್ವಚ್ಚತಾ ಅಭಿಯಾನ – ನಿರಂತರ ಜಾಗೃತಿಯ ಆಶಯ
ಕನ್ನಡ ರಾಜ್ಯೋತ್ಸವದಂದು ಆರಂಭಗೊಂಡ ಈ ಒಂದು ತಿಂಗಳ ಸ್ವಚ್ಛತಾ ಆಂದೋಲನವು ಕೇವಲ ಪರಿಸರದಲ್ಲಿನ ಕಸವನ್ನು ತೆರವುಗೊಳಿಸುವ ಕಾರ್ಯಕ್ರಮಕ್ಕೆ ಸೀಮಿತವಾಗದೆ, ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವು, ಸಾಮಾಜಿಕ ಹೊಣೆಗಾರಿಕೆ ಹಾಗೂ ಪರಿಸರ ಸಂರಕ್ಷಣೆಯ ಪ್ರಜ್ಞೆಯನ್ನು ಬೆಳೆಸುವ ಮಹತ್ವದ ಪ್ರಯತ್ನವಾಗಿದೆ. ಸ್ವಚ್ಛತೆ ಎನ್ನುವುದು ಕೇವಲ ಕಣ್ಣಿಗೆ ಕಾಣುವ ಕಸವನ್ನು ತೆಗೆಯುವುದಲ್ಲ; ಅದು ನಮ್ಮ ಮನಸ್ಸಿನಲ್ಲಿ ಸಾಮಾಜಿಕ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸುವ ಸಂಸ್ಕಾರವೂ ಹೌದು. ಬೀದಿಗಳು ಸ್ವಚ್ಛವಾದಾಗ ಊರು ಸುಂದರವಾಗುತ್ತದೆ; ಮನಸ್ಸುಗಳಲ್ಲಿ ಸ್ವಚ್ಛತೆಯ ಅರಿವು ಮೂಡಿದಾಗ ಸಮಾಜವೇ ಸುಂದರವಾಗುತ್ತದೆ. ಕನ್ನಡ ರಾಜ್ಯೋತ್ಸವದ ಸಂಭ್ರಮವನ್ನು ಸಮಾಜಸೇವೆಯೊಂದಿಗೆ ಬೆಸೆದು, ಸ್ವಚ್ಛತೆಯ ಮೂಲಕ ಸಾರ್ವಜನಿಕರಲ್ಲಿ ಜಾಗೃತಿಯ ಬೀಜ ಬಿತ್ತುವ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ನ ಈ ಪ್ರಯತ್ನವು ಸಾಮೂಹಿಕ ಹೊಣೆಗಾರಿಕೆ ಮತ್ತು ಸಾಮಾಜಿಕ ಸೌಹಾರ್ದಕ್ಕೆ ಉತ್ತಮ ನಿದರ್ಶನವಾಗಿದೆ.