ಅಬುಧಾಬಿ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಅಬುಧಾಬಿಯ ಕೆಸಿಎಫ್ ಸೆಂಟರ್ನಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಪರಂಪರೆಯ ಮಹತ್ವವನ್ನು ಸ್ಮರಿಸಲಾಯಿತು. ಪ್ರಾಸ್ತಾವಿಕ ಮಾತುಗಳನ್ನಾಡಿದ ಅಮ್ಮಾರ್ ಮುಈನಿ ಸಖಾಫಿ ಕನ್ನಡ ಭಾಷೆಯ ಮಹತ್ವ, ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಹಾಗೂ ವಿದೇಶದಲ್ಲಿರುವ ಕನ್ನಡಿಗರು ತಮ್ಮ ನಾಡು-ನುಡಿ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಅಗತ್ಯವನ್ನು ವಿವರಿಸಿದರು. ಕಾರ್ಯಕ್ರಮವನ್ನು ಹಕೀಮ್ ತುರ್ಕಳಿಕೆ ಅವರು ಉದ್ಘಾಟಿಸಿದರು. ಕಬೀರ್ ಬಾಯಂಬಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ರಝಾಕ್ ಸಅದಿ ಶುಭ ನುಡಿದರು. ಉಮರ್ ಇಶ್ವರ ಮಂಗಳ ಅವರು ಸ್ವಾಗತಿಸಿ ಎನ್.ಕೆ. ಸಿದ್ದೀಕ್ ಅಲಿಕೆ ವಂದಿಸಿದರು.
ಅಬುಧಾಬಿ ಕೆಸಿಎಫ್ ಸೆಂಟರ್ನಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ
01
Nov