Featured, ಇತರೆ

ರಾಜ್ಯ ಮಟ್ಟದ ದಫ್ ಸ್ಪರ್ಧೆಯ ವೇದಿಕೆಯಲ್ಲಿ ಇಬ್ಬರು ಯಶಸ್ವಿ ಸಾಧಕರಿಗೆ ಅದ್ದೂರಿ ಸನ್ಮಾನ; ಡಾ| ಉಮ್ಮರ್ ಬೀಜದಕಟ್ಟೆ | ಟಿ.ಎಂ ಶಹೀದ್ ತೆಕ್ಕಿಲ್

ಸುಳ್ಯ, ಸಂಪಾಜೆ; ಜ.5, ಸುಳ್ಯ ತಾಲ್ಲೂಕು ಹಾಗೂ ರಾಜ್ಯ ಮಟ್ಟದ ಧಪ್ ಸ್ಪರ್ದೆ ಸಂಪಾಜೆಯಲ್ಲಿ ನಡೆಯಿತು‌‌‌. ಈ ಸಂಧರ್ಬದಲ್ಲಿ ತಾಲ್ಲೂಕಿನಲ್ಲಿಯೇ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಇಬ್ಬರು ನಾಯಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಮುಹಿಯ್ಯದ್ದೀನ್ ರಿಪಾಯಿ ದಫ್ ಅಸೋಸಿಯೇಶನ್ ಪೇರಡ್ಕ, ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆಗಳು ಗೂನಡ್ಕ, ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ, ಸಿ. ಕೆ. ಲೆಜೆಂಡ್ಸ್ ಕಲ್ಲುಗುಂಡಿ, ತಾಲೂಕು ಮುಸ್ಲೀಂ ಫೆಡರೇಷನ್ ಹಾಗು ಇತರ ಸಂಘ ಸಂಸ್ಥೆಗಳ ಸಹಕಾರದಲ್ಲಿ ಸುಳ್ಯ ತಾಲೂಕು ಮಟ್ಟದ ಹಾಗೂ ರಾಜ್ಯಮಟ್ಟದ ದಫ್ ಸ್ಪರ್ಧೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜ.5ರಂದು ನಡೆಯಿತು.

ಡಾ. ಉಮ್ಮ‌ರ್ ಬೀಜದ ಕಟ್ಟೆ ಧಪ್ ಸ್ಪರ್ಧಾಳುಗಳಿಗೆ ಧಪ್ ಹಸ್ತಾಂತರ ಮಾಡುವುದರ ಮೂಲಕ ದಫ್ ಸ್ಪರ್ಧೆಗೆ ಚಾಲನೆ ನೀಡಿದರು. ಮೊದಲು ತಾಲೂಕು ಮಟ್ಟದ ಸ್ಪರ್ಧೆ ನಡೆಯಿತು. ತಾಲ್ಲೂಕು ಮಟ್ಟದ ಸ್ಪರ್ದೆಯಲ್ಲಿ ಸುಳ್ಯ ತಾಲೂಕಿನ ನಾಲ್ಕು ತಂಡಗಳು ಭಾಗ ವಹಿಸಿದವು ಗೂನಡ್ಕ, ಕಲ್ಲುಗುಂಡಿ,ಪೇರಡ್ಕ,
ಹಾಗೂ ಸುಳ್ಯ ಗಾಂಧಿನಗರ ತಂಡಗಳ ಮದ್ಯೆ ಸ್ಪರ್ದೆ ನಡೆಯಿತು.

ಸುಳ್ಯ ತಾಲೂಕಿನ ನಲ್ಲಿ ಪ್ರಪ್ರಥಮ ಬಾರಿಗೆ ತಾಲೂಕು ಮಟ್ಟದ ವಿಭಾಗಕ್ಕೆ ಪ್ರತ್ಯೇಕ ಸ್ಪರ್ಧೆ ಏರ್ಪಡಿಸಿರುವುದು ಗಮನಾರ್ಹ. ಇದು ಸುಳ್ಯ ತಾಲೂಕಿನಲ್ಲಿ ಇಸ್ಲಾಮಿಕ್ ದಫ್ ಕಲೆ ಬೆಳೆಯಲು ಪ್ರೋತ್ಸಾಹಕ್ಕೆ ಕಾರಣವಾಯಿತು ಇದೇ‌ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಜನ ಪ್ರತಿನಿಧಿ ಅಲ್ಲದಿದ್ದರೂ ಊರಿನ ಅಭಿವೃದ್ಧಿ ವಿಚಾರವಾಗಿ ತನ್ನ ರಾಜಕೀಯ ಒಡನಾಟ ದಿಂದ ಹಲವಾರು ಕಾಮಗಾರಿಗಳಿಗೆ ಸರಕಾರದಿಂದ ಅನುದಾನ ತರಲು ಯಶಸ್ವಿಯಾದ ಟಿ ಎಮ್ ಶಹೀದ್ ತೆಕ್ಕಿಲ್, ಹಾಗೂ ಬಡತನದಲ್ಲಿ ಹುಟ್ಟಿ ಸ್ವಂತ ಪರಿಶ್ರಮದಿಂದ ಉನ್ನತ ಹುದ್ದೆಗೆ ಏರಿ ಇದೀಗ ಹಲವಾರು ಯುವಕರಿಗೆ ಉದ್ಯೋಗಗಳನ್ನು ದೊರಕಿಸಿಕೊಟ್ಟ ಉದ್ಯೋಗ ದಾತ, ಕನ್ನಡ ಪ್ರಿಯ ಹಾಗೂ ಕನ್ನಡಾಭಿಮಾನಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಡಾ|ಉಮ್ಮರ್ ಬೀಜದಕಟ್ಟೆ ಇವರಿಗೆ ದಫ್ ಸಂಘಟಕರ ಪರವಾಗಿ ಸನ್ಮಾನ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಜಿ ಕೆ ಹಮೀದ್, ಲತೀಫ್ ಹರ್ಲಡ್ಕ, ಹಮೀದ್ ಕುತ್ತಮೊಟ್ಟೆ, ಇವರುಗಳಿಗೆ ಗೌರವಾರ್ಪಣೆ ಮಾಡಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಟಿ.ಎಂ ಶಹೀದ್👇

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಉಮ್ಮರ್ ಬೀಜದಕಟ್ಟೆ👇

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಮಾಲುದ್ದೀನ್ ಅಮಾನಿ ಕೆ ಎಮ್ ಮುಸ್ತಫಾ,ಅನ್ವರ್ ಶಿರೂರ್, ಅಬೂಬಕ್ಕರ್ ಅಡ್ಕಾರ್ , ಮಾತುಗಳನಾಡಿ ಶುಭ ಹಾರೈಸಿದರು,
ಆದಂ ಹಾಜಿ ಕಮ್ಮಾಡಿ,ಶಂಸುದ್ದೀನ್ ಎಸ್, ಇಕ್ಬಾಲ್ ಎಲಿಮಲೆ, ಉಮ್ಮರ್ ಕೆ.ಎಸ್, ಅಲಿ ಹಾಜಿ ಕಲ್ಲುಗುಂಡಿ, ತಾಜ್ ಮಹಮ್ಮದ್ ಸಂಪಾಜೆ, ಅಶ್ರಫ್ ಸೆಂಟ್ಯಾರ್, ಶರೀಫ್ ಕಂಠಿ, ನಝೀರ್ ಶಾಂತಿನಗರ, ಕಲಂದರ್ ಎಲಿಮಲೆ,ಇಕ್ಬಾಲ್ ಸುಣ್ಣಮೂಲೆ,ಉಮ್ಮರ್ ತಾಜ್, ರಶೀದ್ ಜಟ್ಟಿಪಳ್ಳ, ಸಿದ್ದೀಕ್ ಕೊಕ್ಕೊ, ಉಮ್ಮರ್ ಗೂನಡ್ಕ, ಕಲಾಂ ಸುಳ್ಯ, ಅಶ್ರಫ್ ಟರ್ಲಿ, ರಹೀಮ್ ಬೀಜದಕಟ್ಟೆ, ಖಾದರ್ ಮೊಂಟೆಗಾರ್, ಹನೀಫ್ ಮೊಂಟೆಗಾರ್, ಅಮೀರ್ ಕುಕ್ಕುಂಬಳ್ಳ, ಕೆ.ಬಿ ಇಬ್ರಾಹಿಂ, ಮುಂತಾದವರು ಉಪಸ್ಥಿತರಿದ್ದರು. ಜಿ.ಕೆ ಹನೀಫ್ ಸ್ವಾಗತಿಸಿ ಎಸ್ ಕೆ ಹನೀಫ್ ವಂಧಿಸಿದರು.

ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೆ HMBV ಸೋಂಕು? – ರಾಜ್ಯ ಆರೋಗ್ಯ ಇಲಾಖೆಯ ವಿವರಣೆ ಹೀಗಿದೆ;!

“ರಸ್ತೆಗಳು ಪ್ರಿಯಾಂಕಾ ಕೆನ್ನೆಯಂತೆ” – ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ಭರವಸೆಗೆ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಖಂಡನೆ

ದೆಹಲಿ ಸರ್ಕಾರವನ್ನು ದುರುಪಯೋಗಪಡಿಸಿಕೊಂಡು ಬಿಜೆಪಿ ಚುನಾವಣೆಯಲ್ಲಿ ಮತ ಕೇಳುತ್ತಿದೆ: ಅರವಿಂದ್ ಕೇಜ್ರಿವಾಲ್

ಜಾರ್ಜ್ ಸೊರೊಸ್‌ಗೆ ಅಮೆರಿಕದ ಅತ್ಯುನ್ನತ ಪ್ರಶಸ್ತಿ: ಹಾಸ್ಯಾಸ್ಪದ ಎಂದು ಟೀಕಿಸಿದ ಎಲೋನ್ ಮಸ್ಕ್

ಪ್ರೆಸಿಡೆನ್ಶಿಯಲ್ ಮೆಡಲ್ ಆಫ್ ಫ್ರೀಡಮ್’ ಪಡೆದ ಮೊದಲ ಫುಟ್ಬಾಲ್ ಆಟಗಾರ: ಮೆಸ್ಸಿ

ಭಾರತೀಯತೆ – ಹಿಂದುತ್ವ – ಹವ್ಯಕ ಸಮ್ಮೇಳನ……ವಿವೇಕಾನಂದ. ಎಚ್. ಕೆ🖋

m

Related Posts