Featured, ಅಂಕಣ, ಸ್ಥಳೀಯ

ಅರಂಬೂರು ; ಸಂಪನ್ನಗೊಂಡ ಮಾಂಬ್ಲಿ ಉತ್ಸವ

ಮಾಂಬ್ಲಿ ಬಸ್ಟಾಂಡ್ ವಾಟ್ಸಾಪ್ ಗ್ರೂಪ್ ದಶಮಾನೋತ್ಸವ ಸಂಭ್ರಮ ಸಡಗರ

ಅರಂಬೂರು :- ಇಲ್ಲಿನ ಸಮಾನ ಮನಸ್ಕ ಯುವಕರ ” ಮಾಂಬ್ಲಿ ಬಸ್ಟಾಂಡ್ ವಾಟ್ಸಾಪ್ ಗ್ರೂಪ್” ಇದರ ದಶಮಾನೋತ್ಸವದ ಅಂಗವಾಗಿ ಆಯೋಜಿಸಿದ ಮಾಂಬ್ಲಿ ಉತ್ಸವ ಕಾರ್ಯಕ್ರಮ ಜನವರಿ 26 ಮಾಂಬ್ಲಿ ಶಟಲ್ ಗ್ರೌಂಡ್ ನಲ್ಲಿ ಸಮಾಪ್ತಿ ಗೊಂಡಿತು.

ಉತ್ಸವದ ಭಾಗವಾಗಿ ಆಟೋಟ ಸ್ಪರ್ಧೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ‘ಡೆಮೋ ಬಸ್ಟಾಂಡ್’ ಹಾಗೂ ಸ್ಕೂಟರ್ ಲಕ್ಕಿ ಡ್ರಾ ಪ್ರಮುಖ ಆಕರ್ಷಣೆಗಳಾಗಿದ್ದವು.

ಸಮಾಜ ಸೇವೆಯನ್ನು ಪರಿಗಣಿಸಿ ಆಪತ್ಭಾಂದವರಾಗಿ ಸೇವೆ ಸಲ್ಲಿಸಿದ ಮೊಯ್ದೀನ್ ಪಾಲಡ್ಕ ರವರಿಗೆ ಸನ್ಮಾನ ಮಾಡಲಾಯಿತು.

ರವಿವಾರ 26ರಂದು ಗಣರಾಜ್ಯೋತ್ಸವ ಪ್ರಯುಕ್ತ ಬೆಳಗ್ಗೆ ರಾಷ್ಟ್ರಗೀತೆಯೊಂದಿಗೆ ವಿದ್ಯುಕ್ತ ಚಾಲನೆ ಪಡೆದ ಕಾರ್ಯಕ್ರಮದಲ್ಲಿ ಸದಸ್ಯರಿಗಾಗಿ ಆವೇಶಭರಿತವಾದ ಟ್ರೆಷರ್ ಹಂಟ್ ( ನಿಧಿ ಹುಡುಕಾಟ) ಹಾಗೂ ಮಕ್ಕಳಿಗೆ 3ಸ್ ಫುಟ್ಬಾಲ್ ಆಯೋಜಿಸಲಾಗಿತ್ತು. ಸಂಜೆಯ ಬಳಿಕ ಮಕ್ಕಳಿಗೆ ಹಾಗೂ ಸದಸ್ಯರಿಗೆ ಹಾಗೂ ಊರವರಿಗೆ ವಿವಿಧ ಮನರಂಜನಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಅದರೊಂದಿಗೆ ಹಗ್ಗ ಜಗ್ಗಾಟ, ಮಡಿಕೆ ಹೊಡೆಯುವ ಸ್ಪರ್ಧೆ, ಪ್ಲಾಸ್ಟಿಕ್ ಬಾಲ್ ಕ್ರಿಕೆಟ್ ಪ್ರಮುಖ ಆಕರ್ಷಣೆಯ ಸ್ಪರ್ಧೆಗಳಾಗಿತ್ತು.

ಜ್ಯೂಸ್, ಕೌಂಟರ್, ಅಂಗಡಿ ಮುಂಗಟ್ಟುಗಳು, ಬಸ್ಟಾಂಡ್ ಅಲಂಕಾರ, ಸಿಡಿಮದ್ದು ಪ್ರದರ್ಶನ, ಲೈಟಿಂಗ್ಸ್ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗನ್ನು ನೀಡಿತ್ತು.

ಸಂಭ್ರಮ, ವಿಜೃಂಭಣೆಯಿಂದ ಕೂಡಿದ ಕಾರ್ಯಕ್ರಮದಲ್ಲಿ ಮಕ್ಕಳು, ಊರವರು , ಮಹಿಳೆಯರು ಸೇರಿದ್ದು ಮಾತ್ರವಲ್ಲದೆ ಎಲ್ಲರೂ ಆವೇಶದಿಂದ ಭಾಗಿಯಾದರು.

m

Related Posts