ಪುತ್ತೂರು: ಮಜ್ಲಿಸ್ ಎಜುಪಾರ್ಕ್ ಪ್ರೈಮರಿ ಸ್ಕೂಲ್ ಮುಡಿಪು ಇದರ ಅದೀನದಲ್ಲಿ ಕಾರ್ಯಾಚರಿಸುತ್ತಿರುವ ಮಜ್ಲಿಸ್ ಝಹರಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ಸಾಲ್ಮರ ಇದರ ವಾರ್ಷಿಕೋತ್ಸವವು ಫೆಬ್ರವರಿ 12 ರಂದು ನಡೆಯಿತು.
ಮಜ್ಲಿಸ್ ಗ್ರೂಪಿನ ಡೈರೆಕ್ಟರಾದ ಸಯ್ಯದ್ ಜಮಲುಲ್ಲೈಲಿ ಜಲಾಲುದ್ದೀನ್ ತಂಙಳ್ ಪಾತೂರು ಕಾರ್ಯಕ್ರಮವನ್ನು ದುಆದೊಂದಿಗೆ ಚಾಲನೆಗೊಳಿಸಿದರು. ಉದ್ಘಾಟಕರಾಗಿ ಆಗಮಿಸಿದ ಅಬೂಶಝಾ ಅಬ್ದುರ್ರಝಾಕ್ ಖಾಸಿಮಿ ಉಸ್ತಾದರು ಮಾತನಾಡಿ ಶಾಲಾ ಶಿಕ್ಷಣದ ಅನಿವಾರ್ಯತೆ ಹಾಗೂ ಮದರಸ ಶಿಕ್ಷಣದ ಮಹತ್ವತೆಯನ್ನು ವಿವರಿಸಿದರು.ಮಜ್ಲಿಸ್ ಗ್ರೂಪಿನ ಮೇನೇಜರ್ ಅಬ್ದುಲ್ ಅಝೀಝ್ ಚೆನ್ನಾರು ಪ್ರಾಸ್ತಾವಿಕ ಭಾಷಣ ಮಾಡಿದರು.
ವೇದಿಕೆಯಲ್ಲಿ ಡಾ.ಫಾರೂಖ್ ಉಪ್ಪಿನಂಗಡಿ, ಯೂಸುಫ್ ಹಾಜಿ ಗೌಸಿಯಾ, ಬಶೀರ್ ಹಾಜಿ ಕೆಮ್ಮಾಯಿ, ಇಕ್ಬಾಲ್ ಬಪ್ಪಳಿಗೆ, ಸ್ವಾಲಿಹ್ ಮುರ, ಉಮರ್ ಮೈದಾನಿಮೂಲೆ, ಅಬೂಬಕ್ಕರ್ ಮೈದಾನಿಮೂಲೆ, ಸಂಸ್ಥೆಯ ಮದರಸ ಅಧ್ಯಾಪಕರಾದ ನೌಶದ್ ಹಿಮಮಿ, ಇಲ್ಯಾಸ್ ಹನೀಫಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ನಂತರ ಶಾಲಾ ವಿದ್ಯಾರ್ಥಿಗಳಿಂದ ಹಾಡು, ಭಾಷಣ, ದಫ್, ಬುರ್ದಾ, ಖವಾಲಿ, ಫ್ಲವರ್ ಷೋ ಮುಂತಾದ ಆಕರ್ಷಕ ಕಾರ್ಯಕ್ರಮಗಳು ನಡೆಯಿತು. ಬಳಿಕ ಬಹುಮಾನ ವಿತರಿಸಲಾಯಿತು. ಸಂಸ್ಥೆಯ ಅಧ್ಯಾಪಕಿಯರು ವಿವಿಧ ಕಾರ್ಯಕ್ರಮ ನಿರೂಪಿಸಿದರು.ಅಬ್ದುರ್ರಹ್ಮಾನ್ ಮುಸ್ಲಿಯಾರ್ ಸ್ವಾಗತಿಸಿ, ನೌಶದ್ ಹಿಮಮಿ ವಂದಿಸಿದರು.

ವರದಿ: ಬಿ.ಕೆ.ಸ್ವಾದಿಕ್ ಅಲಿ ಸಂಪ್ಯ




m
