Featured, ಅಂಕಣ, ಸ್ಥಳೀಯ

ಬದ್ರಿಯಾ ಜುಮಾ ಮಸೀದಿ ಶಾಂತಿಗುಡ್ಡೆ ಮಹಾಸಭೆ

ಶಾಂತಿಗುಡ್ಡೆ, ಬಜ್ಪೆ: ಬದ್ರಿಯಾ ಜುಮಾ ಮಸೀದಿ ಶಾಂತಿಗುಡ್ಡೆಯ ಆಡಳಿತ ಸಮಿತಿಯ ವಾರ್ಷಿಕ ಮಹಾಸಭೆ ಜಮಾಅತ್ ಅಧ್ಯಕ್ಷ ಇಬ್ರಾಹೀಂ ಬದ್ರುದ್ದೀನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದ ಆರಂಭದಲ್ಲಿ ಸ್ಥಳೀಯ ಖತೀಬ್ ಲುಖ್ಮಾನುಲ್ ಹಕೀಂ ಫೈಜಿ ಅಲ್ ಮಅ್’ಬರಿ ಅವರು ದುಆಃ ನೆರವೇರಿಸಿದರು. ನಂತರ ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಗೆ ಮುಂದುವರೆಯಲಾಯಿತು.

ಈ ಸಂದರ್ಭದಲ್ಲಿ, ಜಮಾಅತ್ ಸಮಿತಿಯ ನೂತನ ಅಧ್ಯಕ್ಷರಾಗಿ ರಫೀಕ್ P, ಉಪಾಧ್ಯಕ್ಷರಾಗಿ ಬದ್ರುದ್ದೀನ್ BK, ಪ್ರಧಾನ ಕಾರ್ಯದರ್ಶಿಯಾಗಿ ಮುಸ್ತಫಾ, ಜೊತೆ ಕಾರ್ಯದರ್ಶಿಯಾಗಿ ಇಬ್ರಾಹೀಂ ಬದ್ರುದ್ದೀನ್ ಮತ್ತು ಕೋಶಾಧಿಕಾರಿಯಾಗಿ ಝಾಕೀರ್ ಹುಸೈನ್ ಅವರು ಆಯ್ಕೆಯಾದರು.

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ದಾವೂದುಲ್ ಹಕೀಂ, ಅಬ್ದುಲ್ ರಹ್ಮಾನ್, ಸಮೀಉಲ್ಲಾ ಖಾನ್, H ಮುಹ್ಯದ್ದಿ, ಚೆರಿಯೋನು ಮತ್ತು ಹಫೀಜ್ ಅವರುಗಳು ಆಯ್ಕೆಯಾದರು.  ಕಾರ್ಯಕ್ರಮವನ್ನು ಮೂರು ಸ್ವಲಾತ್ ನೊಂದಿಗೆ ಸಮಾಪ್ತಿಗೊಳಿಸಲಾಯಿತು.

(ಮಾಹಿತಿ: ಲುಕ್ಮಾನ್ ಫೈಝಿ ಶಾಂತಿಗುಡ್ಡೆ)

m

Related Posts