Featured, ಅಂಕಣ, ಸ್ಥಳೀಯ

ವ್ಹಾರೆ ವ್ಹಾ!!!! ಜೆಲ್ಲಿ ಚೆಲ್ಲಾ ಪಿಲ್ಲಿ; ಪಾದಚಾರಿಗಳಿಗೂ ಹೆಲ್ಮೆಟ್ ಕಡ್ಡಾಯವಾಗುವ ಸಾಧ್ಯತೆ! ಪಂಚಾಯತ್ ಸಭೆಯ ಗದ್ದಲ ರಾಜಕೀಯ ಪಕ್ಷದ ಮನವಿಗೂ ಕಿವಿಗೆ ಹೂ ಇಟ್ಟ ನಗರ ಪಂಚಾಯತ್

ನಗರದ ಸುಳ್ಯ ಆಲೆಟ್ಟಿ ತಿರುವು ರಸ್ತೆ ಯಿಂದ ಗುರುಂಪು ರಸ್ತೆ ಉದ್ದಕ್ಕೂ ಭೂಗರ್ಭ ಪೈಪ್ ಲೈನ್ ಕಾಮಗಾರಿಯಿಂದಾಗಿ ರಸ್ತೆಗಳು ಹದಗೆಟ್ಟಿದ್ದು, ಸಾರ್ವಜನಿಕರು ಮತ್ತು ವಾಹನ ಸವಾರರು ತೀವ್ರ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಸ್ಥಳೀಯ ಪಕ್ಷಗಳು ಮತ್ತು ನಗರ ಪಂಚಾಯತ್ ಸದಸ್ಯರು, ಆಡಳಿತ ಪಕ್ಷ ಹಾಗೂ ಅಧಿಕಾರಿಗಳ ಮೇಲೆ ತೀವ್ರ ಒತ್ತಡ ಹೇರಿದ್ದರು.

ಈ ಸಮಸ್ಯೆಯನ್ನು ಪರಿಹರಿಸಲು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಪಂಚಾಯತ್ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ, ಇದುವರೆಗೂ ಸಮರ್ಪಕ ಕ್ರಮ ಜರುಗಿಲ್ಲ.  ಮಾತ್ರವಲ್ಲ , ಈ ಬಗ್ಗೆ ನಗರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಕೂಡ ಬಾರಿ ಚರ್ಚೆ ಗದ್ದಲಗಳು ಕೂಡ ನಡೆದಿದ್ದು ಗಮನಾರ್ಹ.

ನಂತರದಲ್ಲಿ, ಇತ್ತೀಚೆಗೆ ರಸ್ತೆಗೆ ಜೆಲ್ಲಿಕಲ್ಲು ತುಂಬಿಸಿ ಸರಿಪಡಿಸುವ ಕೆಲಸ ಪ್ರಾರಂಭವಾಗಿದೆ. ಆದರೆ, ಈ ಕೆಲಸವು ಕೇವಲ ತೋರ್ಪಡಿಕೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅರ್ಧಂಬರ್ದ ಕೆಲಸದಿಂದಾಗಿ ರಸ್ತೆಯ ಸ್ಥಿತಿ ಹಿಂದಿದ್ದಕ್ಕಿಂತಲೂ ಹೆಚ್ಚು ಅಪಾಯಕಾರಿಯಾಗಿದೆ. ರಸ್ತೆಗೆ ಹಾಕಲಾದ ಜೆಲ್ಲಿ ಕಲ್ಲುಗಳು ವಾಹನದ ಚಕ್ರಗಳಿಗೆ ಸಿಲುಕಿ ಪಾದಚಾರಿಗಳಿಗೆ ಸ್ಥಳೀಯ ಅಂಗಡಿಗಳಿಗೆ ರಟ್ಟಿದ ಪ್ರಸಂಗಳು ಉಂಟಾಗಿರುವುದಾಗಿಯೂ ಸ್ಥಳೀಯರು ತಿಳಿಸಿದ್ದಾರೆ.

ಈ ಹಿಂದೆ ನಡೆದ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಈ ವಿಷಯವನ್ನು ಕುರಿತು ತೀವ್ರ ಚರ್ಚೆ ನಡೆದಿತ್ತು. ಸದಸ್ಯರಾದ ಶರೀಫ್ ಕಂಠಿ, ವೆಂಕಟಪ್ಪ ಗೌಡ, ಉಮ್ಮರ್ ಕೆ.ಎಸ್ ಸೇರಿದಂತೆ ವಿಪಕ್ಷದ ನಾಯಕರು ಈ ಬಗ್ಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಸ್ಥಳೀಯರು ರಸ್ತೆ ಸರಿಪಡಿಸುವಿಕೆಗೆ ತ್ವರಿತ ಮತ್ತು ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಪಂಚಾಯತ್ ಅಧಿಕಾರಿಗಳಿಗೆ ಒತ್ತಾಯಿಸಿದ್ದರು. ಆದರೆ, ಇನ್ನೂ ಸಮರ್ಪಕ ಪರಿಹಾರ ದೊರಕಿಲ್ಲ.

ಸ್ಥಳೀಯರ ಪ್ರಕಾರ, ರಸ್ತೆಯ ಸ್ಥಿತಿಯು ವಾಹನ ಚಾಲಕರು ಮತ್ತು ಪಾದಚಾರಿಗಳಿಗೆ ಹೆಚ್ಚಿನ ಅಪಾಯವನ್ನು ಉಂಟುಮಾಡುತ್ತಿದೆ. ಈ ಸಮಸ್ಯೆಯನ್ನು ತಕ್ಷಣ ಪರಿಹರಿಸದಿದ್ದಲ್ಲಿ, ದೊಡ್ಡ ಅನಾಹುತ ಸಂಭವಿಸಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಪಂಚಾಯತ್ ಅಧಿಕಾರಿಗಳು ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ರಸ್ತೆ ಸರಿಪಡಿಸುವಿಕೆಯ ಕೆಲಸವು ಪೂರ್ಣಗೊಂಡರೆ ಮಾತ್ರ ಸಮಸ್ಯೆಗೆ ಪರಿಹಾರ.

m

Related Posts