Featured, ಅಂಕಣ, ಸ್ಥಳೀಯ

‘ಕುಂದ ಉತ್ಸವ’ ಕಾರ್ಯಕ್ರಮದಲ್ಲಿ ನಿಯಮ ಉಲ್ಲಂಘಿಸಿ ಡಿಜೆ ಬಳಕೆ| ಪ್ರಕರಣ ದಾಖಲು

ಕುಂದಾಪುರ: ಕೋಡಿ ಸಮುದ್ರ ತೀರದಲ್ಲಿ ನಡೆದ ‘ಕುಂದ ಉತ್ಸವ’ ಕಾರ್ಯಕ್ರಮದಲ್ಲಿ ತಡರಾತ್ರಿಯವರೆಗೆ ಡಿಜೆ ಸೌಂಡ್ ಬಳಸಿ ಕರ್ಕಶ ಧ್ವನಿಯಿಂದ ಸಾರ್ವಜನಿಕರಿಗೆ ಉಪದ್ರವ ಉಂಟುಮಾಡಿದ ಆರೋಪದ ಮೇಲೆ ಕಾರ್ಯಕ್ರಮದ ಆಯೋಜಕರು ಮತ್ತು ಡಿಜೆ ಮೇಲೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೆಬ್ರವರಿ 12 ರಿಂದ 16ರ ವರೆಗೆ ಕುಂದಾಪುರ ಕೋಡಿ ಸಮುದ್ರ ತೀರದಲ್ಲಿ ‘ಕುಂದ ಉತ್ಸವ’ ನಡೆಸಲು ಷರತ್ತುಬದ್ಧ ಪರವಾನಗಿ ನೀಡಲಾಗಿತ್ತು. ಫೆಬ್ರವರಿ 16ರಂದು ಸಂಜೆ 7 ಗಂಟೆಗೆ ಉತ್ಸವ ಪ್ರಾರಂಭವಾಗಿ, ಫೆಬ್ರವರಿ 17ರಂದು ಮಧ್ಯರಾತ್ರಿ 12.50 ವರೆಗೆ ಡಿಜೆ ಸೌಂಡ್ ಸಿಸ್ಟಮ್ ಮತ್ತು ಇತರ ಸಲಕರಣೆಗಳನ್ನು ಬಳಸಲು ಯಾವುದೇ ಅನುಮತಿ ಪಡೆಯದೆ, ಸಾರ್ವಜನಿಕ ಸ್ಥಳವಾದ ಕುಂದಾಪುರ ತಾಲೂಕಿನ ಕೋಡಿ ಸಮುದ್ರ ತೀರದಲ್ಲಿ ಡಿಜೆ ಧ್ವನಿವರ್ಧಕವನ್ನು ಬಳಸಿ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಇದರಿಂದಾಗಿ ಕರ್ಕಶ ಧ್ವನಿಯಿಂದ ಸಾರ್ವಜನಿಕರಿಗೆ ಉಪದ್ರವ ಉಂಟಾಗಿ ತೊಂದರೆ ನೀಡಿದ್ದಾರೆ ಎಂಬ ಆರೋಪವಿದೆ.

ಈ ಘಟನೆಗೆ ಸಂಬಂಧಿಸಿದಂತೆ ಕುಂದ ಉತ್ಸವದ ಆಯೋಜಕರು ಪ್ರದೀಪ ಬಸ್ರೂರು, ಹನೀಫ್ ಗುಲ್ವಾಡಿ, ಕೋಡಿ ಮುನಾಫ್, ಡಿಜೆ ರಂಜು ಮತ್ತು ಇತರರ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಪ್ರಕರಣವನ್ನು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 19/2025, ಕಲಂ: 292, 112 BNS ಮತ್ತು ಕಲಂ: 109 K P Act ಪ್ರಕಾರ ದಾಖಲಿಸಲಾಗಿದೆ.

m

Related Posts