Featured, ಅಂಕಣ, ಸ್ಥಳೀಯ

SKSSF ಕಲ್ಲುಗುಂಡಿ ಶಾಖೆ ವತಿಯಿಂದ ನಡೆದ ಮಜ್ಲಿಸನ್ನೂರ್ ವಾರ್ಷಿಕ ಹಾಗೂ ಅಗಲಿದ ಸಮಸ್ತ ನೇತಾರರ ಅನುಸ್ಮರಣೆ SKSSF ಸ್ಥಾಪಕ ದಿನಾಚರಣೆ ಕಾರ್ಯಕ್ರಮ ಅದ್ಧೂರಿಯ ಪ್ರೌಢ ಸಮಾಪ್ತಿ

ಕಲ್ಲುಗುಂಡಿ:- ಫೆಬ್ರವರಿ 19 ರಂದು ಗೂನಡ್ಕ ಸಜ್ಜನ ಸಭಾ ಭವನದಲ್ಲಿ SKSSF ಕಲ್ಲುಗುಂಡಿ ಶಾಖೆ ವತಿಯಿಂದ ನಡೆದ ಮಜ್ಲಿಸನ್ನೂರ್ ವಾರ್ಷಿಕ ಹಾಗೂ ಅಗಲಿದ ಸಮಸ್ತ ನೇತಾರರ ಅನುಸ್ಮರಣೆ SKSSF ಸ್ಥಾಪಕ ದಿನಾಚರಣೆ ಕಾರ್ಯಕ್ರಮ ಅದ್ಧೂರಿಯ ಪ್ರೌಢ ಸಮಾಪ್ತಿಗೊಂಡಿತು,

 ಕಾರ್ಯಕ್ರಮದಲ್ಲಿ ಕ್ಯಾಂಪಸ್ ವಿಂಗ್ ಟೀ ಶರ್ಟ್ ಅನಾವರಣಗೊಳಿಸಲಾಯಿತು, ಸೇವೆಯಲ್ಲಿ ಗುರುತಿಸಿದ ವ್ಯಕ್ತಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು,

 ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ SKSSF ಕಲ್ಲುಗುಂಡಿ ಶಾಖೆಯ ಅಧ್ಯಕ್ಷ ಝೈನುದ್ದೀನ್ ಯಾಮನಿ ವಹಿಸಿದರು,ಶೈಖುನಾ ಅಬ್ದುಲ್ಲಾ ಫೈಝಿ ಎಡಪಾಲ ಉಸ್ತಾದರು ಉದ್ಘಾಟಿಸಿದರು, ಕೀಚೇರಿ ಅಬ್ದುಲ್ ಗಫೂರ್ ಮೌಲವಿ ಮುಖ್ಯ ಪ್ರಭಾಷಣ ನಡೆಸಿದರು, ಏನ್ ಪಿ ಎಂ ಸಯ್ಯದ್ ಜಲಾಲುದ್ದೀನ್ ಅಲ್ ಬುಖಾರಿ ತಂಙಳ್ ದುಆ ನೇತೃತ್ವವನ್ನು ವಹಿಸಿದ್ದರು,

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಹೀದ್ ತೇಕ್ಕಿಲ್, ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ ಉಮ್ಮರ್ ಬೀಜದಕಟ್ಟೆ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಹಾಗೂ ಇನ್ನಿತರ ಹಲವಾರು ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಉಮಾರಾ ಹಾಗು ಉಲಮಾ ನೇತಾರರು ವೇದಿಕೆಯಲ್ಲಿ ಉಪಸ್ಥಿತರಿದ್ದರು

ಗ್ರಾಮ ಪಂಚಾಯತ್ ಸದಸ್ಯ ಜಿ ಕೆ ಹಮೀದ್ ಸ್ವಾಗತಿಸಿ, ಅಬ್ದುಲ್ ಖಾದರ್ ಮೊತ್ತೆಂಗಾರ್ ಧನ್ಯವಾದ ಸಮರ್ಪಿಸಿದರು.

m

Related Posts