ಕಲ್ಲುಗುಂಡಿ: SKSSF ಕಲ್ಲುಗುಂಡಿ ಶಾಖೆಯ ವತಿಯಿಂದ ಕಲ್ಲುಗುಂಡಿ ಪೇಟೆಯಲ್ಲಿ ಸ್ವಚ್ಛತಾ ಕಾರ್ಯಕ್ರಮವು ಆಯೋಜಿಸಲಾಯಿತು. ಈ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು ಚಾಲನೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ.ಎಂ. ಶಹಿದ್ ತೆಕ್ಕಿಲ್, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಸ್.ಕೆ. ಹನೀಫ್, ಮಾಜಿ ಅಧ್ಯಕ್ಷರಾದ ಜಿ.ಕೆ. ಹಮೀದ್ ಗೂನಡ್ಕ, ಜಗದೀಶ್ ರೈ, ವಿಮಲಾ ಪ್ರಸಾದ್, ಕೊಡಗು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮೊಯ್ದೀನ್ ಕುಂಞಿ ಉಪಸ್ಥಿತರಿದ್ದರು.

ಇದೇ ರೀತಿ ಸಂಘಟನೆ ಮುಖ್ಯಸ್ಥರಾದ ತಾಜ್ ಮಹಮ್ಮದ್, ತಾಜುದ್ದೀನ್ ಟರ್ಲಿ, ಅಬ್ದುಲ್ ಖಾದರ್ ಮೊಟ್ಟಂಗಾರ, ತಾಜ್ ಅರಂತೋಡು, ಕಲೀಲ್ ಪೆರಡ್ಲ, ಕಾನಕೋಡ್ ಮಹಮ್ಮದ್, ಆರೀಫ್ ಫೈಝಿ ಹಾಗೂ ಸಂಪಾಜೆ ಜುಮ್ಮಾ ಮಸೀದಿ ಖತೀಬ್ ಲುಕ್ಮನೂಲ್ ಹಕೀಮ್ ಫೈಝಿ ಉಪಸ್ಥಿತರಿದ್ದರು.

SKSSF ಕಲ್ಲುಗುಂಡಿ ಶಾಖೆಯ ಕಾರ್ಯಕರ್ತರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.





m
