Featured, ಅಂಕಣ, ಇತರೆ, ಸ್ಥಳೀಯ

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಉತ್ತೀರ್ಣ ಪ್ರತಿಭಾವಂತರಿಗೆ ಪುರಸ್ಕಾರ: ಸುಳ್ಯ ತಾಲೂಕು ಮೊಗೇರ ಸಂಘದಿಂದ ಗೌರವ

ಸುಳ್ಯ ತಾಲೂಕು ಮೊಗೇರ ಸಂಘ ( ರಿ ) ಇದರ ವತಿಯಿಂದ 2024-2025 ನೇ ಸಾಲಿನಲ್ಲಿ SSLC ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದು ಉತ್ತೀರ್ಣರಾದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಕು. ಚರಿಷ್ಮಾ , ಹವ್ಯ ಶ್ರೀ , ಧನ್ಯ ಶ್ರೀ , ನವ್ಯ ಶ್ರೀ , ವೀಕ್ಷಾ , ಸುಹಾಸಿನಿ , ಮಂಜು ಶ್ರೀ , ಚೈತ್ರ ಪ್ರತಿಭಾ ಪುರಸ್ಕಾರ ಪಡೆದುಕೊಂಡರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಮೊಗೇರ ಸಂಘದ ಅಧ್ಯಕ್ಷರಾದ ಕರುಣಾಕರ ಪಲ್ಲತಡ್ಕ ವಹಿಸಿದ್ದರು. ಕಾರ್ಯಕ್ರಮವನ್ನು ಕರ್ನಾಟಕ ಸರಕಾರದ ಮಾಜಿ ಸಚಿವರಾದ ಎಸ್.ಅಂಗಾರ ಇವರು ಡಾ| ಬಿ.ಆರ್. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು. ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಮೊಗೇರ ಸಂಘದ ಅಧ್ಯಕ್ಷರಾದ ನಂದರಾಜ್ ಸಂಕೇಶ , ಸುಳ್ಯ ತಾಲೂಕು ಸಂಘದ ಗೌರವಾಧ್ಯಕ್ಷರಾದ ಕೇಶವ ಮಾಸ್ಟರ್ ಹೊಸಗದ್ದೆ , ಶಂಕರ್ ಪೆರಾಜೆ, ಸಂಘಟನಾ ಕಾರ್ಯಧರ್ಶಿ ಅಚ್ಚುತ್ತ ಮೆಲ್ಕಜೆ , ಪ್ರಧಾನ ಕಾರ್ಯದರ್ಶಿಯಾದ ಬಾಳಪ್ಪ ಮಣಿಮಜಲು , ನಿವೃತ್ತ ಶಿಕ್ಷಕರಾದ ರಘುನಾಥ ಕಾಯರ ಹಾಗೇಯೆ ಕಾರ್ಯಕ್ರಮದಲ್ಲಿ ಸದಸ್ಯರಾದ ಬಾಬು ಕನಕಮಜಲು , ಮಧುಸೂದನ್ ಬೂಡು , ವಸಂತ ಚತ್ರಪ್ಪಾಡಿ ಉಪಸ್ಥಿತಿತರಿದ್ದರು. ಬಾಳಪ್ಪ ಮಣಿಮಜಲು ಸ್ವಾಗತಿಸಿ ಗೌರವಾಧ್ಯಕ್ಷರಾದ ಶಂಕರ್ ಪೆರಾಜೆ ವಂದಿಸಿದರು ಮತ್ತು ಪ್ರಕಾಶ್.ಪಿ.ಎಸ್ ಪಾತೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

m

Related Posts