Featured, ಇತರೆ, ಸ್ಥಳೀಯ

ಕಲ್ಲುಮುಟ್ಲು ಅಂಗನವಾಡಿ ಕೇಂದ್ರದ ತಡೆಗೋಡೆ ನಿರ್ಮಾಣಕ್ಕೆ ಒತ್ತಾಯಿಸಿ SDPI ವತಿಯಿಂದ ಶಿಶು ಅಭಿವೃದ್ಧಿ ಯೋಜನಾಧಿಕಾರಿ(CDPO)ಗೆ ಮನವಿ

ಸುಳ್ಯ: ಕಲ್ಲುಮುಟ್ಟು ಅಂಗನವಾಡಿ ಕೇಂದ್ರದ ಮುಂಭಾಗದಲ್ಲಿ ಕಳೆದ ವರ್ಷ ಮಳೆಯಿಂದ ಕುಸಿದು ಬಿದ್ದಿರುವ ತಡೆಗೋಡೆಯನ್ನು ಕೂಡಲೇ ಮರು ನಿರ್ಮಿಸಬೇಕೆಂದು ಆಗ್ರಹಿಸಿ, ಎಸ್.ಡಿ.ಪಿ.ಐ ಕಲ್ಲುಮುಟ್ಟು ಬ್ರಾಂಚ್ ಸಮಿತಿಯ ವತಿಯಿಂದ ಸುಳ್ಯದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ (CDPO) ಮನವಿ ಸಲ್ಲಿಸಲಾಗಿದೆ.

ಕಳೆದ ವರ್ಷ ಮಳೆಯಿಂದಾಗಿ ಅಂಗನವಾಡಿ ಕೇಂದ್ರದ ಮುಂಭಾಗದ ತಡೆಗೋಡೆ ಕುಸಿದಿದ್ದು, ಈ ಕುರಿತು ಆರು ತಿಂಗಳ ಹಿಂದೆ ನೀಡಿದ ದೂರಿನ ಮೇರೆಗೆ ಇಲಾಖೆಯು 2025-26ನೇ ಸಾಲಿನ ಅಂಗನವಾಡಿ ನಿರ್ವಹಣಾ ಅನುದಾನದಲ್ಲಿ ತಡೆಗೋಡೆ ನಿರ್ಮಿಸಲು ಕ್ರಿಯಾ ಯೋಜನೆಯಲ್ಲಿ ಮೀಸಲಿಡಲಾಗಿದೆ ಎಂದು ತಿಳಿಸಲಾಗಿತ್ತು. ಆದರೆ, ಈ ವಿಷಯವಾಗಿ ಪತ್ರ ಬರೆದು ಹಲವು ತಿಂಗಳು ಕಳೆದರೂ ಇಲ್ಲಿಯವರೆಗೆ ಕಾಮಗಾರಿ ಪ್ರಾರಂಭವಾಗಿಲ್ಲ.
ಅಂಗನವಾಡಿ ಕೇಂದ್ರದಲ್ಲಿ ಸಣ್ಣ ಮಕ್ಕಳಿದ್ದು, ತಡೆಗೋಡೆ ಇಲ್ಲದಿರುವುದು ಮಕ್ಕಳ ಸುರಕ್ಷತೆಗೆ ಅಪಾಯವನ್ನುಂಟು ಮಾಡುತ್ತಿದೆ. ಆದ್ದರಿಂದ, ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯವನ್ನು ತುರ್ತಾಗಿ ಪರಿಗಣಿಸಿ, ಮೀಸಲಿಟ್ಟ ಅನುದಾನದ ಮೂಲಕ ತಕ್ಷಣವೇ ವೈಜ್ಞಾನಿಕ ರೀತಿಯಲ್ಲಿ ತಡೆಗೋಡೆಯನ್ನು ಮರು ನಿರ್ಮಿಸಬೇಕೆಂದು ಎಸ್.ಡಿ.ಪಿ.ಐ ಕಲ್ಲುಮುಟ್ಲು ಬ್ರಾಂಚ್ ಸಮಿತಿಯ ಅಧ್ಯಕ್ಷರಾದ ಸಮೀರ್ ಹೈಮಾ ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಎಸ್‌ಡಿಪಿಐ ಸುಳ್ಯ ಬ್ಲಾಕ್ ಅಧ್ಯಕ್ಷರಾದ ಸಿದ್ದೀಕ್ ಸಿ.ಎ ಉಪಸ್ಥಿತರಿದ್ದರು

m

Related Posts