ಬೆಳ್ಳಾರೆ: ಬಿಜೆಪಿ ಪಕ್ಷದ ನಿಸ್ವಾರ್ಥ ಕಾರ್ಯಕರ್ತ ದಿವಂಗತ ಪ್ರವೀಣ್ ನೆಟ್ಟಾರು ಅವರ ಸ್ಮೃತಿ ದಿನದ ಅಂಗವಾಗಿ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ಪಕ್ಷದ ಜಿಲ್ಲಾ ಅಧ್ಯಕ್ಷರು ಸುಳ್ಯ ಮಂಡಲ ಅಧ್ಯಕ್ಷ ಹಾಗೂ ಮುಖಂಡರು ಮತ್ತು ಕಾರ್ಯಕರ್ತರು ಅವರ ನಿವಾಸಕ್ಕೆ ಭೇಟಿ ನೀಡಿ, ಪುತ್ಥಳಿಗೆ ಹಾರ ಹಾಕಿ ಪುಷ್ಪನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಇವರು ದಿವಂಗತ ಪ್ರವೀಣ್ ನೆಟ್ಟಾರು ಅವರ ತ್ಯಾಗ, ಹೋರಾಟ, ಪಕ್ಷದ ಮೇಲಿನ ನಿಷ್ಠಾವಂತ ಸೇವೆ ಹಾಗೂ ಸಾಮಾಜಿಕ ಕಳಕಳಿ ಸಮಾಜಕ್ಕೆ ಸದಾ ಮಾದರಿಯಾಗಿದ್ದು, ಅವರ ಆದರ್ಶಗಳು ಮುಂದಿನ ಪೀಳಿಗೆಗೂ ಪ್ರೇರಣೆಯಾಗಲಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ, ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ಯುವ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ಕಾರ್ಯದರ್ಶಿ ಪ್ರದೀಪ್ ಕೊಲ್ಲರಮೂಲೆ, ಪಕ್ಷದ ಪ್ರಮುಖರಾದ ಪ್ರಸನ್ನಕುಮಾರ್ ದರ್ಬೆ, ಅಜಿತ್ ಕಿಲ್ಲಂಗೊಡಿ, ಅನೂಪ್ ಬಿಳಿಮಲೆ, ದಿಲೀಪ್ ಬೆಳ್ಳಾರೆ, ಆರ್.ಕೆ. ಭಟ್ ಕುರುಂಬುಡೆಲು, ಚಂದ್ರಶೇಖರ ಪನ್ನೆ ಸೇರಿದಂತೆ ಹಲವಾರು ಕಾರ್ಯಕರ್ತರು ಹಾಗೂ ಪ್ರವೀಣ್ ನೆಟ್ಟಾರು ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.
ಸ್ಮೃತಿ ದಿನದ ಅಂಗವಾಗಿ ಎಲ್ಲರೂ ದಿವಂಗತ ಪ್ರವೀಣ್ ನೆಟ್ಟಾರು ಅವರ ಸೇವೆಯನ್ನು ಸ್ಮರಿಸಿ ಗೌರವ ನಮನ ಸಲ್ಲಿಸಿದರು.




m
