Featured, ಅಂಕಣ, ಸ್ಥಳೀಯ

ವಕ್ಪ್ ತಿದ್ದುಪಡಿ ಮಸೂದೆ ವಿರುದ್ಧ ಬೆಳ್ಳಾರೆ ಝಕರಿಯಾ ಜುಮ್ಮಾ ಮಸೀದಿಯ ವತಿಯಿಂದ ಪ್ರತಿಭಟನೆ

ಬೆಳ್ಳಾರೆ : ಕೇಂದ್ರ ಸರಕಾರದ ವಖ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಬೆಳ್ಳಾರೆ ಝಕರಿಯಾ ಜುಮ್ಮಾ ಮಸೀದಿಯ ವತಿಯಿಂದ ಇಂದು ಪ್ರತಿಭಟನೆ ನಡೆಸಲಾಯಿತು.

 ಜುಮ್ಮಾ ನಮಾಝ್ ಬಳಿಕ ಮಸೀದಿ ಮುಂಬಾಗದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಸ್ಥಳೀಯ ಮದ್ರಸ ಸದರ್ ಮುಅಲ್ಲಿಮ್ ಬಹು ಮುಹಮ್ಮದ್ ನವವಿ ಮುಂಡೋಲೆ ಮಾತನಾಡಿದರು. ಪ್ರತಿಭಟನೆಯಲ್ಲಿ ಕೇಂದ್ರ ಸರಕಾರ ತರುತ್ತಿರುವ ವಖ್ಫ್ ತಿದ್ದುಪಡಿ ಮಸೂದೆಯನ್ನು ಕೂಡಲೇ ಹಿಂತೆಗೆದು ಕೊಳ್ಳಬೇಕೆಂದು ಅಗ್ರಹಿಸಲಾಯಿತು.

ಜಮಾಅತ್ ಅಧ್ಯಕ್ಷರಾದ ಯು.ಎಚ್ ಅಬೂಬಕ್ಕರ್, ಉಪಾಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ , ಕಾರ್ಯದರ್ಶಿ ಬಶೀರ್ ಕಲ್ಲಪನೆ ಹಾಗೂ ಆಡಳಿತ ಸಮಿತಿ ಸದಸ್ಯರುಗಳು, ಜಮಾಅತರು ಸೇರಿದಂತೆ ಹಲವರು ಭಾಗವಹಿಸಿದ್ದರು.

m

Related Posts