Featured, ಇತರೆ, ಸ್ಥಳೀಯ

ಸುಳ್ಯ : ಚಾಲಕನ ನಿಯಂತ್ರಣ ತಪ್ಪಿ 20 ಅಡಿ ಗಾತ್ರದ ಕಂಟೈನರ್ ರಸ್ತೆಯಿಂದ ಪಲ್ಟಿ : ಕಂಟೈನರ್ ಅಡಿಗೆ ಸಿಲುಕಿದ ಸ್ಕೂಟಿ, ಬ್ಯಾಂಕ್ ನ ತಡೆಗೋಡೆಗೆ ಹಾನಿ

ಸುಳ್ಯ : ಸುಳ್ಯ KSRTC ಬಸ್ ನಿಲ್ದಾಣ ಬಳಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ 20 ಅಡಿ ಗಾತ್ರದ ಕಂಟೈನರ್ ಒಂದು ರಸ್ತೆಯಿಂದ ಪಲ್ಟಿಯಾಗಿ ರಸ್ತೆಯ ಪಕ್ಕದ ಪಿಎಲ್ ಡಿ ಬ್ಯಾಂಕ್ ನ ತಡೆಗೋಡೆಗೆ ಅಪ್ಪಳಿಸಿ ತಡೆಗೋಡೆ ಹಾನಿಯಾದ ಘಟನೆ ಇದೀಗ ವರದಿಯಾಗಿದೆ ಇಂದು ಬೆಳಗಿನ ಜಾವ 6.45 ಸಮಯದಲ್ಲಿ ಈ ಅಪಘಾತ ಸಂಭವಿಸಿದ್ದು ರಸ್ತೆಯ ಬದಿಯ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ ಸ್ಕೂಟಿಯೊಂದು ಕಂಟೈನರ್ ಅಡಿಗೆ ಸಿಲುಕಿದೆ ಎನ್ನಲಾಗಿದೆ. ಸಣ್ಣ ಪುಟ್ಟ ಗಾಯಗಳೊಂದಿಗೆ ಚಾಲಕ ಪಾರಾಗಿದ್ದು. ಕಂಟೈನರ್ ಚಾಲಕನ ನಿದ್ದೆ ಮಂಪರು ನಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ

m

Related Posts